ಮಂಜೇಶ್ವರ ಉಪಜಿಲ್ಲಾ ಕಲೋತ್ಸವ ಧರ್ಮತ್ತಡ್ಕ ಶಾಲೆಯಲ್ಲಿ ಭರದ ಸಿದ್ಧತೆ
ಉಪ್ಪಳ: ೬೨ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಈ ತಿಂಗಳ ೭ರಿಂದ ೧೦ರ ತನಕ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ಜರಗಲಿದ್ದು ಈ ಕುರಿತು ವಿವರಿಸಲು ಐಲ ಶಾರದಾ ಬೋವೀಸ್ ಶಾಲೆಯಲ್ಲಿ ಸಂಬಂಧಪಟ್ಟವರು ಪತ್ರಿಕಾಗೋಷ್ಠಿ ನಡೆಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಿತೇಂದ್ರ ಮಾತನಾಡಿ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ ಕಲೋತ್ಸವದ ಪೂರ್ವಸಿದ್ಧತೆಗಳು ಭರದಿಂದ ಸಾಗುತ್ತಿದೆ. ನಗರಪ್ರದೇಶದಿಂದ ದೂರವಿರುವ ಈ ಪ್ರದೇಶದಲ್ಲಿ ನಡೆ ಯುವ ಕಾರ್ಯಕ್ರಮ ಯಶಸ್ವಿಗೊಳ್ಳು ವಲ್ಲಿ ಎಲ್ಲರೂ ಸಹಕಾರ ನೀಡಬೇಕಾಗಿ ವಿನಂತಿಸಿದರು.
ಜನರಲ್ ಕನ್ವೀನರ್ ರಾಮಚಂದ್ರ ಭಟ್ ಮಾತನಾಡಿ, ೧೨೦ಕ್ಕೂ ಅಧಿಕ ಶಾಲೆಗಳಿಂದ ೪೦೦೦ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ೨೫ ವೇದಿಕೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಗೈಯ್ಯಲಿದ್ದಾರೆ. ಸಂಸದರು, ಶಾಸಕರು ಸಹಿತ ಅನೇಕ ಗಣ್ಯರು ಭಾಗವಹಿಸುವುದಾಗಿ ಅವರು ತಿಳಿಸಿದರು. ವ್ಯವಸ್ಥಾಪಕ ಶಂಕರನಾರಾ ಯಣ ಭಟ್, ಹೈಸ್ಕೂಲ್ ಮುಖ್ಯೋ ಪಾಧ್ಯಾಯ ಗೋವಿಂದ ಭಟ್, ಯು.ಪಿ. ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್, ಐಲ ಬೋವೀಸ್ ಶಾಲೆಯ ಮುಖ್ಯ ಶಿಕ್ಷಕಿ ಜಲಜಾಕ್ಷಿ, ಪಿಟಿಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರೋಗ್ರಾಂ ಕನ್ವೀನರ್ ಸತೀಶ್ ಕುಮಾರ್ ಶೆಟ್ಟಿ, ಫೈನಾನ್ಸ್ ಕನ್ವೀನರ್ ರಾಮಮೋ ಹನ್, ಪ್ರಚಾರ ಸಮಿತಿ ಕನ್ವೀನರ್ ಪ್ರದೀಪ್ ಕೆ. ಉಪಸ್ಥಿತರಿದ್ದರು.