ಮಂಜೇಶ್ವರ ಬ್ಲೋಕ್ ಪಂಚಾಯತ್ ಬಜೆಟ್ನಲ್ಲಿ ಆರೋಗ್ಯ, ವಸತಿ, ಶುಚಿತ್ವಕ್ಕೆ ಆದ್ಯತೆ
ಮಂಜೇಶ್ವರ: ಆರೋಗ್ಯ, ವಸತಿ, ಶುಚಿತ್ವ, ತ್ಯಾಜ್ಯ ಸಂಸ್ಕರಣೆ ಎಂಬಿವುಗಳಿಗೆ ಆದ್ಯತೆ ನೀಡಿ ಮಂಜೇಶ್ವರ ಬ್ಲೋಕ್ ಪಂಚಾಯತ್ನ 2025-26ನೇ ವರ್ಷದ ಬಜೆಟ್ನ್ನು ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಪಿ.ಕೆ ಮಂಡಿ ಸಿದರು. 92,98,292ರೂ. ಪ್ರಾರಂಭಿಕ ಬಾಕಿ ಹಾಗೂ 37,78,049,73 ರೂ. ವೆಚ್ಚ ಮತ್ತು 1,00,23,065 ರೂ. ಉಳಿಕೆ ನಿರೀಕ್ಷಿಸುವ ಬಜೆಟ್ ಮಂಡಿಸಲಾಗಿದೆ. ಬ್ಲೋಕ್ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಾದ ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ಮಂಜೇಶ್ವರ ಸಿಎಚ್ಸಿ ಎಂಬೀ ಆಸ್ಪತ್ರೆಗಳಲ್ಲಿ ಔಷಧ ಲಭ್ಯಗೊಳಿಸಲು 2 ಕೋಟಿ ರೂ. ಮೀಸಲಿಡಲಾಗಿದೆ. ಎಲ್ಲರಿಗೂ ಮನೆ ಎಂಬ ಗುರಿ ಸಾಧಿಸಲು ಬ್ಲೋಕ್ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ರಹಿತರನ್ನು ಪತ್ತೆಹಚ್ಚಿ ಪಿ.ಎಂ. ಜನ್ಮನ್ ಯೋಜನೆಯಲ್ಲಿ ಸೇರಿಸಿ 2.40 ಲಕ್ಷ ರೂ.ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ವಿಭಾಗದ ಮಕ್ಕಳ ಶಿಕ್ಷಣಕ್ಕೆ, ವಸತಿ, ಅಧ್ಯಯನ ಕೊಠಡಿ ನಿರ್ಮಾಣಕ್ಕೆ 1.7 ಲಕ್ಷ ರೂ. ಮೀಸಲಿಡಲಾಗಿದೆ. ತ್ಯಾಜ್ಯ ನಿರ್ಮೂಲನೆ, ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡುವುದು,ತ್ಯಾಜ್ಯವನ್ನು ಮೂಲದಲ್ಲೇ ಸಂಸ್ಕರಿಸುವುದು ಎಂಬಿವುಗಳಿಗಾಗಿ ಹಸಿರು ಕೇರಳ ಮಿಷನ್, ಕ್ಲೀನ್ ಕೇರಳ ಮಿಶನ್ ಎಂಬಿವುಗಳ ಚಟುವಟಿಕೆಗಳಿಗೆ 90 ಲಕ್ಷ ರೂ. ಮೀಸಲಿಡಲಾಯಿತು.
ಭತ್ತ ಕೃಷಿ ಅಭಿವೃದ್ಧಿ 32 ಲಕ್ಷ ರೂ., ಕ್ಷೀರ ಕೃಷಿಕರಿಗೆ ಹಾಲಿಗೆ ಸಬ್ಸಿಡಿ 20 ಲಕ್ಷ ರೂ., ಭತ್ತೋತ್ಪಾದಕ ಸಮಿತಿಗೆ ಅಕ್ಕಿ ಗಿರಣಿ, ಸಂಬAಧಪಟ್ಟ ಉಪಕರಣಗಳನ್ನು ಖರೀದಿಸಲು 10 ಲಕ್ಷ ರೂ, ತರಕಾರಿ ಕೃಷಿಗೆ 2 ಲಕ್ಷ ರೂ., ನೇಂದ್ರ ಬಾಳೆ ಕೃಷಿಗೆ 1 ಲಕ್ಷ ರೂ. ಮೀಸಲಿಡಲಾಗಿದೆ. ಶಿಕ್ಷಣ ವಲಯದಲ್ಲಿ ವಿವಿಧ ಯೋಜನೆಗ ಳಿಗಾಗಿ 46 ಲಕ್ಷ ರೂ., ಭಿನ್ನ ಸಾಮರ್ಥ್ಯದವರಿಗೆ ಸ್ಕಾಲರ್ ಶಿಪ್ಗೆ 30ಲಕ್ಷ ರೂ., ಮಹಿಳೆಯರಿಗೆ ಸ್ವ-ಉದ್ಯೋಗ ತರಬೇತಿಗೆ 40 ಲಕ್ಷ ರೂ. ಮೀಸಲಿಡಲಾಗಿದೆ. ವಿವಿಧ ಯೋಜನೆ ಗಳನ್ನು ಸಂಯೋಜಿಸಿ ಕೊಂಡು ಕುಡಿಯುವ ನೀರು ಯೋಜನೆಗೆ 51 ಲಕ್ಷ ರೂ., ರಸ್ತೆ ಅಭಿವೃದ್ಧಿಗೆ 4.3 ಕೋಟಿ, ಚರಂಡಿ ನಿರ್ಮಾಣಕ್ಕೆ 51.25 ಲಕ್ಷ ರೂ. ಮೀಸಲಿಡಲಾಗಿದೆ. ಮಕ್ಕಳ ಕ್ರೀಡಾ ಸಾಮರ್ಥ್ಯ ಖಚಿತಪಡಿಸುವ ಯೋಜನೆ ಗಳಿಗೆ ಬಜೆಟ್ನಲ್ಲಿ ನಿರ್ದೇಶವಿದೆ. ಮದ್ಯ, ಮಾದಕ ಪದಾರ್ಥ ಮೊದಲಾದ ಸಾಮಾಜಿಕ ವಿಪತ್ತುಗಳಿಂದ ವಿದ್ಯಾರ್ಥಿ ಗಳನ್ನು, ಯುವಜನರನ್ನು ದೂರ ಮಾಡಲು, ಕ್ರೀಡಾ ಕ್ಷೇತ್ರದಲ್ಲಿ ಗಮನ ಕೇಂದ್ರೀಕರಿಸಲು ಯೋಜನೆಗಳನ್ನು ಆವಿಷ್ಕರಿಸಲಾಗು ವುದು. ಇದಕ್ಕೆ 10 ಲಕ್ಷ ರೂ. ಮೀಸಲಿಡಲಾಗಿದೆ. ಪ್ರವಾಸೋದ್ಯಮ ಸಾಧ್ಯತೆಗಳ ಅಧ್ಯಯನಕ್ಕಾಗಿ 5 ಲಕ್ಷ ರೂ., ಲೈಬ್ರೆರಿಗಳಿಗೆ ಉಪಕರಣ ಖರೀದಿಗೆ 10 ಲಕ್ಷ ರೂ., ಕ್ಲಬ್ಗಳಿಗೆ ಸ್ಪೋರ್ಟ್ಸ್ ಉಪಕರಣಗಳಿಗಾಗಿ 7ಲಕ್ಷ ರೂ., ಬ್ಲೋಕ್ ಡೇ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ 5 ಲಕ್ಷ ರೂ. ಮೀಸಲಿಡಲಾ ಯಿತು. ಅಧ್ಯಕ್ಷೆ ಶಮೀನ ಟೀಚರ್ ಅಧ್ಯಕ್ಷತೆ ವಹಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಶಂಸೀನಾ, ಅಬ್ದುಲ್ ಹಮೀದ್, ಸರೋಜಾ ಆರ್ ಬಲ್ಲಾಳ್, ಯೋಜನಾ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಮುಂಡಿತ್ತಡ್ಕ ಮಾತನಾಡಿದರು.