ಮತದಾನಕ್ಕಿನ್ನು ಆರು ದಿನ : ಅಭ್ಯರ್ಥಿಗಳ ಪ್ರಚಾರ ನಾಗಾಲೋಟ
ಕಾಸರಗೋಡು: ಮತದಾನಕ್ಕಿನ್ನು ಕೇವಲ ಆರು ದಿನಗಳು ಮಾತ್ರವೇ ಬಾಕಿ ಇರುವಾಗ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು ಬಿಡುವಿಲ್ಲದೆ ನಿರತರಾಗಿದ್ದಾರೆ. ಐಕ್ಯರಂಗದ ಅಭ್ಯರ್ಥಿ ರಾಜ್ಮೋಹನ್ ಉಣ್ಮಿತ್ತಾನ್ ನಿನ್ನೆ ತೃಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಪರ್ಯಟನೆ ನಡೆಸಿದರೆ ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು. ಎನ್ಡಿಎ ಅಭ್ಯರ್ಥಿಅಶ್ವಿನಿ ಎಂ.ಎಲ್ ಉದುಮ ಕ್ಷೇತ್ರದಲ್ಲಿ ಪರ್ಯಟನೆ ನಡೆಸಿದರು.
ಐಕ್ಯರಂಗದ ಅಭ್ಯರ್ಥಿಯ ಪರ್ಯಟನೆಯನ್ನು ತೈಕಡಪ್ಪುರನಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷೆ ಜೆಬಿ ಮೇತ್ತರ್ ಉದ್ಘಾಟಿಸಿದರು. ವಿವಿಧ ಕಡೆಗಳಲ್ಲಿ ಪಿ.ಕೆ. ಫೈಸಲ್, ಎಜಿಸಿ ಬಷೀರ್, ಎಂ.ಪಿ. ಜೋಸೆಫ್, ನಡುಕುನ್ನಿಲ್ ವಿಜಯನ್, ರಮೇಶನ್ ಕರುವಾಚೇರಿ, ಕೆ. ರಾಜೇಂದ್ರನ್ ಮೊದಲಾದವರು ಭಾಗವಹಿಸಿದರು. ಪಡನ್ನದಲ್ಲಿ ನಿನ್ನೆಯ ಪರ್ಯಟನೆ ಸಮಾಪ್ತಿಗೊಂಡಿದೆ.
ಎಡರಂಗದ ಅಭ್ಯರ್ಥಿ ಕುಳೂರಿನಿಂದ ಆರಂಭಿಸಿದ ಪರ್ಯಟನೆ ಕೊಯಿಪ್ಪಾಡಿ ಕಡಪ್ಪುರದಲ್ಲಿ ಸಮಾಪ್ತಿಗೊಂಡಿದೆ. ವಿವಿಧ ಕೇಂದ್ರಗಳಲ್ಲಿ ಎಡರಂಗದ ಮುಖಂಡರಾದ ಕೆ.ಆರ್. ಜಯಾನಂದ, ವಿ.ವಿ. ರಮೇಶನ್, ಪಿ. ರಘುದೇವನ್, ಪಿ.ಕೆ. ನಿಶಾಂತ್, ಗಿರೀಶ್, ಪಿ.ಕೆ. ಅಬ್ದುಲ್ಲ ಕುಂಞಿ, ಡಿ. ಸುಬ್ಬಣ್ಣ ಆಳ್ವ, ಎಂ.ಸಿ. ಸಜಿತ್, ರಾಮಕೃಷ್ಣ ಕಡಂಬಾರ್, ಮುಸ್ತಫ ಕಡಂಬಾರ್, ಸಿ.ಎ. ಸುಬೈರ್, ಅಬ್ದುಲ್ ರಜಾಕ್ ಚಿಪ್ಪಾರು, ರಾಘವ ಚೇರಾಲು, ಮುಹಮ್ಮದ್ ಕೈಕಂಬ, ಸಿದ್ದಿಕ್ ಕೈಕಂಬ, ಮುಹಮ್ಮದ್ ಮಾತನಾಡಿದರು.
ಎನ್ಡಿಎ ಅಭ್ಯರ್ಥಿಯ ಪರ್ಯಟನೆಯಲ್ಲಿ ಮುಳಿಯಾರು ಮಂಡಲ ಅಧ್ಯಕ್ಷ ಮಹೇಶ್ ಗೋಪಾಲ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ದಿಲೀಪ್ ಕುಮಾರ್ ಪಳ್ಳಂಜಿ, ಜಯಕುಮಾರ್ ಮಾನಡ್ಕ, ಜಿಲ್ಲಾ ಸಮಿತಿ ಸದಸ್ಯ ಸುಕುಮಾರನ್, ಅನನ್ಯ, ರಜನಿ ಮಾತನಾಡಿದರು.