ಮತ ಎಣಿಕೆಗೆ ಕ್ಷಣಗಣನೆ: ಎಕ್ಸಿಟ್ ಪೋಲ್  ಬಿಜೆಪಿ ವಲಯದಲ್ಲಿ ಭಾರೀ ಹರ್ಷ

ನವದೆಹಲಿ: ಭಾರೀ ಕುತೂಹಲಕ್ಕೆ ಕಾರಣವಾಗಿರುವ ಲೋಕಸಭಾ ಚುನಾ ವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊAಡಿವAತೆಯೇ ಬಿಜೆಪಿ ನೇತೃತ್ವದ ಎನ್ಡಿಎ 400ರ ತನಕ ಸ್ಥಾನ ಗಳಿಸಿ ಹ್ಯಾಟ್ರಿಕ್ ಗೆಲುವು ಸಾಧಿಸ ಲಿದೆಯೆಂದು ಹೆಚ್ಚಿನ ಎಲ್ಲಾ ಚುನಾವ ಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ಫಲಿತಾಂಶಗಳು ಸೂಚಿಸಿದ್ದು, ಅದು ಬಿಜೆಪಿ ಸೇರಿದಂತೆ ಎನ್ಡಿಎ ಕಾರ್ಯ ಕರ್ತರಲ್ಲಿ ಭಾರೀ ಹರ್ಷ ಮೂಡಿಸಿದೆ.
ಮತ ಎಣಿಕೆ ನಾಳೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಕಾಸರ ಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ಪೆರಿಯದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಆದ್ದರಿಂದ ಆ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜ್ಯಾರಿಗೊಳಿಸಲಾಗಿದೆ.
543 ಸಂಸದೀಯ ಸ್ಥಾನಗಳ ಜೊತೆಗೆ ಆಂಧ್ರಪ್ರದೇಶ ಮತ್ತು ಒಡಿಶಾದ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯೂ ನಾಳೆ ನಡೆಯಲಿದೆ. ಲೋಕಸಭಾ ಚುನಾವಣೆ ಜೊತೆ ಒಡಿಶಾ, ಆಂಧ್ರಪ್ರದೇಶದ ಹೊರತಾಗಿ ಈಶಾನ್ಯ ಭಾರತದ ರಾಜ್ಯಗಳಾದ ಅರುಣಾಚಲಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಗಳಿಗೂ ಚುನಾವಣೆ ನqದಿದ್ದು, ಈ ಎರಡೂ ರಾಜ್ಯಗಳ ಮತ ಎಣಿಕೆ ನಿನ್ನೆಯೇ ನಡೆದಿದೆ. ಇದರಲ್ಲಿ ಅರುಣಾಚಲ ಪ್ರದೇಶದ ಒಟ್ಟು 60 ವಿಧಾನಸಭಾ ಸ್ಥಾನಗಳ ಪೈಕಿ 46ರಲ್ಲಿ ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಗೆಲುವು ಸಾಧಿಸಿದೆ. ಸಿಕ್ಕಿಂ ವಿಧಾನಸಭೆಯ ಒಟ್ಟು 32 ಸ್ಥಾನಗಳ ಪೈಕಿ 31ರಲ್ಲೂ ಗೆದ್ದು ಮುಖ್ಯಮಂತ್ರಿ ಪ್ರೇಂಸಿAಗ್ ತಮಾಂಗ್ರ ನೇತೃತ್ವದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ) ಗೆದ್ದು ತನ್ನ ಅಧಿಕಾರ ಉಳಿಸಿಕೊಂಡಿದೆ. ಲೋಕ ಸಭಾ ಚುನಾವಣೆಯ ಮತ ಎಣಿಕೆಯ ಅಗತ್ಯದ ಎಲ್ಲಾ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದೆ ಯೆಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ನಾಳೆ ಮಧ್ಯಾಹ್ನದ ವೇಳೆ ಬಹುತೇಕ ಫಲಿತಾಂಶಗಳು ಹೊರಬರಲಿದೆ.
ಕೇರಳದ ಒಟ್ಟು 20 ಲೋಕಸಭಾ ಕ್ಷೇತ್ರಗಳಲ್ಲಿ ಯುಡಿಎಫ್ 16ರಿಂದ 19ರ ತನಕ, ಎಡರಂಗ1ರಿAದ 3ರ ತನಕ ಮಾತ್ರವಲ್ಲ ಇದೇ ಪ್ರಥಮ ಬಾರಿಗೆ ಬಿಜೆಪಿ ನೇತೃತ್ವದ ಎನ್ಡಿಎ 1ರಿಂದ 3ರ ತನಕ ಸ್ಥಾನ ಲಭಿಸುವ ಸಾಧ್ಯತೆ ಇದೆಯೆಂದು ಹೆಚ್ಚಿನ ಎಲ್ಲಾ ಎಕ್ಸಿಟ್ ಪೋಲ್ಗಳು ಪ್ರವಚಿಸಿವೆ. ಇದರಿಂದ ಯುಡಿಎಫ್ ಮಾತ್ರವಲ್ಲ ಬಿಜೆಪಿಯ ಕೇರಳ ಘಟಕದಲ್ಲೂ ಕಾರ್ಯಕರ್ತರಲ್ಲಿ ಭಾರೀ ಆವೇಶ ಮನೆಮಾಡಿದೆ. ಎಕ್ಸಿಟ್ ಪೋಲ್ ಫಲಿತಾಂಶ ಎಲ್ಡಿಎಫ್ ವಲಯದಲ್ಲಿ ನಿರಾಸೆ ಮೂಡಿಸಿದರೂ ಚುನಾವಣಾ ಫಲಿತಾಂಶ ತಮಗೆ ಅನುಕೂಲಕರವಾಗಿ ಬರಲಿದೆಯೆಂದು ಎಲ್ಡಿಎಫ್ ನೇತಾರರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page