ಮನೆಯಿಂದ 10 ಪವನ್ ಚಿನ್ನ, ನಗದು ಕಳವು
ಕಾಸರಗೋಡು: ಮನೆಗೆ ಕಳ್ಳರು ನುಗ್ಗಿ 10 ಪವನ್ ಚಿನ್ನದೊಡವೆ ಮತ್ತು 25,000 ರೂ. ನಗದು ಕಳವುಗೈದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಚೆರ್ವತ್ತೂರು ಕಾಡಂಗೋಡು ನೆಲ್ಲಿಕ್ಕಾಲ್ನ ಸಿ.ಎ ಶಾಜಿ ಎಂಬವರ ಮನೆಯಿಂದ ಈ ಕಳವು ನಡೆದಿದೆ. ಮನೆಯ ಒಳನುಗ್ಗಿದ ಕಳ್ಳರು ಕಪಾಟು ಮತ್ತು ಮೇಜಿನ ಡ್ರವರ್ನೊಳಗೆ ಇರಿಸಲಾಗಿದ್ದ ನಗ-ನಗದುಗಳನ್ನು ಕಳವುಗೈದಿದ್ದಾರೆ. ಶುಕ್ರವಾರ ಹಗಲು ವೇಳೆ ಈ ಕಳವು ನಡೆದಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಕಳವು ನಡೆಯುವ ವೇಳೆ ಮನೆ ಬಾಗಿಲು ಮುಚ್ಚಿರಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಚಂದೇರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.