ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವ ಆರೋಪಿ ಸೆರೆ

ಕಾಸರಗೋಡು: ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ  ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ  ಡಾ. ವೈಭವ್ ಸಕ್ಸೇನಾ ಅವರು ರೂಪೀಕರಿಸಿದ ವಿಶೇಷ ಪೊಲೀಸರ ತಂಡ ಬಂಧಿಸಿದೆ.

ಬೇಕಲಕ್ಕೆ ಸಮೀಪದ ಕೂವತ್ತೊಟ್ಟಿ ನಿವಾಸಿ ಶಮ್ನಾಸ್ (೩೧) ಬಂಧಿತ ಆರೋಪಿಯಾಗಿದ್ದಾನೆ. ವಿದ್ಯಾನಗರ, ಬೇಕಲ, ಮೇಲ್ಪರಂಬ, ಬೇಡಡ್ಕ ಸೇರಿ ದಂತೆ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳ ಲ್ಲಾಗಿ ಹಲವು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಹಲವು ಪ್ರಕರಣಗಳಲ್ಲಿ ಬಂಧಿತನು ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹೆಚ್ಚು ಜನ ಸಂಚಾರವಿಲ್ಲದ ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿ ರುವ ಮಹಿಳೆಯರನ್ನು ದ್ವಿಚಕ್ರವಾಹನ ದಲ್ಲಿ ಹಿಂಬಾಲಿಸಿಕೊಂಡು ಹೋಗಿ ಸರ ಎಗರಿಸಿ ಪರಾರಿಯಾಗುತ್ತಿರುವುದು ಈತನ ಕಳವು ರೀತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಪತ್ತೆಗಾಗಿ ಪೊಲೀಸರು ಕಳೆದ ಹಲವು ತಿಂಗಳಿಂದ ಮಾರು ವೇಷದಲ್ಲಿ ಕಾರ್ಯಾಚರಣೆಗಿಳಿದಿದ್ದರು. ಆತನನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಕಳವಿಗಾಗಿ ಆರೋಪಿ ಬಳಸಿದ್ದ ಎರಡು ವಾಹನಗಳನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page