ಮಾನ್ಯ: ಹಟ್ಟಿಯಲ್ಲಿದ್ದ ಹಸುವಿನ ಬೆನ್ನಲ್ಲೇ ಕೋಳಿ ಮೇಲೆ ಅಜ್ಞಾತಜೀವಿಯ ದಾಳಿ
ಮಾನ್ಯ: ಮಾನ್ಯ ಬಳಿಯ ಉಳ್ಳೋಡಿಯಲ್ಲಿ ಹಟ್ಟಿಯಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿದ ಅಜ್ಞಾತ ಜೀವಿ ಯಾವುದೆಂದು ಇದುವರೆಗೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇದೇ ವೇಳೆ ನಿನ್ನೆ ರಾತ್ರಿಯೂ ಇದೇ ಪರಿಸರದಲ್ಲಿ ಅಜ್ಞಾತ ಜೀವಿ ಕೋಳಿಯೊಂದರ ಮೇಲೆ ದಾಳಿ ನಡೆಸಿದೆ.
ಉಳ್ಳೋಡಿಯ ದೈವ ಕಲಾವಿದ ಗಣೇಶ್ ಎಂಬವರ ಮನೆ ಬಳಿಯ ಹಟ್ಟಿಯಲ್ಲಿದ್ದ ಹಸುವಿನ ಮೇಲೆ ಮೊನ್ನೆ ರಾತ್ರಿ ಅಜ್ಞಾತ ಜೀವಿದಾಳಿ ನಡೆಸಿತ್ತು. ಕರುವಿನ ದೇಹದಲ್ಲಿ ಪರಚಿದ ಗಾಯಗಳು ಕಂಡುಬಂದಿತ್ತು. ಆದರೆ ದಾಳಿ ನಡೆಸಿದ ಜೀವಿ ಯಾವುದೆಂದು ತಿಳಿದುಬಂದಿಲ್ಲ. ಇದರಿಂದ ಮನೆಯವರು ಹಾಗೂ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿರುವಾಗಲೇ ನಿನ್ನೆಯೂ ಅಜ್ಞಾತಜೀವಿ ಕೋಳಿಯ ಮೇಲೆ ದಾಳಿ ನಡೆಸಿದೆ. ಗಣೇಶ್‌ರಮನೆ ಸಮೀಪದ ಮರದ ಮೇಲೆ ನಿನ್ನೆ ಸಂಜೆ ಹುಂಜ ಕೋಳಿ ಕುಳಿತಿತ್ತು. ಇಂದು ಬೆಳಿಗ್ಗೆ ಕೋಳಿ ಮರದಿಂದ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು ದೇಹದಲ್ಲಿ ಯಾವುದೋ ಪ್ರಾಣಿ ದಾಳಿ ನಡೆಸಿದ ಗುರುತು ಪತ್ತೆಯಾಗಿದೆ. ಮುಂಜಾನೆ 1.30ರಿಂದ 6 ಗಂಟೆ ಮಧ್ಯೆ ಕೋಳಿ ಯ ಮೇಲೆ ದಾಳಿ ನಡೆದಿರಬಹು ದೆಂದು ಮನೆಯವರು ತಿಳಿಸುತ್ತಿದ್ದಾರೆ.
ಹಸುವಿನ ಮೇಲೆ ಅಜ್ಞಾತ ಜೀವಿ ದಾಳಿ ನಡೆಸಿದ ಬಗ್ಗೆ ತಿಳಿದು ಅರಣ್ಯಾಧಿಕಾರಿಗಳು ತಲುಪಿ ಪರಿಶೀಲನೆ ನಡೆಸಿದ್ದರು. ಆದರೆ ಆ ಜೀವಿ ಯಾವುದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಇದರಿಂದ ಆತಂಕ ಸೃಷ್ಟಿಯಾಗಿರುವಾಗಲೇ ಕೋಳಿ ಮೇಲೆ ದಾಳಿ ನಡೆದಿದೆ.