ಮಾವನ ಕೊಲೆಗೈದ ಅಳಿಯ ಸೆರೆ
ಕಾಸರಗೋಡು: ಪತ್ನಿ ತಂದೆಯನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದ ಆರೋಪಿಯಾದ ಅಳಿಯನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.
ತೃಕ್ಕರಿಪುರ ವೈಕದ ರಜೀಶ್ (೩೬) ಬಂಧಿತ ಆರೋಪಿ. ಕಳೆದ ಮಂಗಳವಾರ ರಾತ್ರಿ ಉದಿನೂರು ಪರುತ್ತಿಚ್ಚಾ ಲಿನ ಎಂ.ವಿ. ಬಾಲಕೃಷ್ಣನ್ (೫೪) ಎಂಬವರನ್ನು ಅವರ ಮನೆಯೊಳಗೆ ತಲೆಗೆ ಹೊಡೆದು ಕೊಲೆಗೈಯ್ಯಲಾಗಿತ್ತು. ತಲೆಗೆ ಬಲವಾದ ಏಟು ಬಿದ್ದು ವಿಪರೀತ ರಕ್ತಸ್ರಾವ ಉಂಟಾ ಗಿರುವುದೇ ಸಾವಿಗೆ ಕಾರಣ ವಾಗಿತ್ತೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.
ಕೊಲೆಗೈಯ್ಯಲ್ಪಟ್ಟ ಬಾಲಕೃಷ್ಣನ್ ಮತ್ತು ಅಳಿಯ ರಜೀಶ್ನ ನಡುವೆ ಆಸ್ತಿ ವಿವಾದ ವುಂಟಾಗಿತ್ತೆಂದೂ, ಅದರ ಹೆಸರಲ್ಲಿ ಅವರಿಬ್ಬರ ಮಧ್ಯೆ ಉಂಟಾದ ಜಗಳವೇ ಬಾಲ ಕೃಷ್ಣನ್ರ ಸಾವಿಗೆ ಕಾರಣವಾಗಿ ದೆಯೆಂದು ತನಿಖೆಯಲ್ಲಿ ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನನ್ನು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜ ರುಪಡಿಸಿದ ಬಳಿಕ ನ್ಯಾಯಾ ಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿ ರಿಸಲಾಗಿದೆ.