ಮೀನಾಡಿಪಳ್ಳ ಶ್ರೀ ವನದುರ್ಗಾ ಸನ್ನಿಧಿಯಲ್ಲಿ ರಜತ ವಾರ್ಷಿಕೋತ್ಸವ ನಾಳೆಯಿಂದ
ಎಡನೀರು: ನೆಲ್ಲಿಕಟ್ಟೆ ಮೀನಾಡಿಪಳ್ಳ ಶ್ರೀ ವನದುರ್ಗಾ ವನಶಾಸ್ತಾ ರಕ್ತೇಶ್ವರಿ ನಾಗಕ್ಷೇತ್ರದ ರಜತ ವಾರ್ಷಿಕ ಮಹೋತ್ಸವ ನಾಳೆ, 26ರಂದು ಜರಗಲಿದೆ. ನಾಳೆ ಬೆಳಿಗ್ಗೆ 10.30ಕ್ಕೆ ಉಗ್ರಾಣ ತುಂಬಿಸುವುದು, ರಾತ್ರಿ 7ಕ್ಕೆ ಭರತನಾಟ್ಯ, 8ಕ್ಕೆ ನೃತ್ಯ ವೈವಿಧ್ಯ ನಡೆಯಲಿದೆ. 26ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿಹೋಮ, 8.30ರಿಂದ ವಿವಿಧ ತಂಡಗಳಿAದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀಶಕ್ತಿ ಫ್ರೆಂಡ್ಸ್ ಕ್ಲಬ್ ಶಕ್ತಿನಗರ ಮತ್ತು ಸ್ಥಳೀಯರಿಂದ ಹುಲ್ಪೆ ಮೆರವಣಿಗೆ, ರಾತ್ರಿ 7ಕ್ಕೆ ತಿರುವಾದಿರ, ಕೈಕೊಟ್ಟುಕಳಿ, 8 ಗಂಟೆಗೆ ಮಹಾಪೂಜೆ, 9.30ಕ್ಕೆ ಫೋಕ್ ಮೆಗಾಶೋ ನಡೆಯಲಿದೆ.