ಮೀನು ಹಿಡಿಯುತ್ತಿದ್ದ ಮಧ್ಯೆ ಯುವಕ ನೀರಿಗೆ ಬಿದ್ದು ಮೃತ್ಯು

ಕಾಸರಗೋಡು: ಮೀನು ಹಿಡಿಯುತ್ತಿದ್ದ ಮಧ್ಯೆ ಯುವಕ ಹೊಳೆಗೆ ಬಿದ್ದು ಮೃತಪಟ್ಟರು. ವಲಿಯಪರಂಬ್‌ನಲ್ಲಿ ಘಟನೆ ನಡೆದಿದೆ. ಇಲ್ಲಿನ ವೆಳುತ್ತಪೊಯ್ಯ ನಿವಾಸಿ ಗೋಪಾಲನ್‌ರ ಪುತ್ರ ಕೆ.ಪಿ.ಪಿ. ಮನೋಜ್ (35) ಮೃತಪಟ್ಟವರು. ನಿನ್ನೆ ಸಂಜೆ 5 ಗಂಟೆ ವೇಳೆ ಓರಿ ಚೆಂಬಂಡೆ ಮಾಡ್ ಎಂಬ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದ ಮಧ್ಯೆ ತೀವ್ರ ಗಾಳಿ ಹಾಗೂ ಮಳೆಗೆ ದೋಣಿ ಮಗುಚಿ ಮನೋಜ್ ನೀರಿನಲ್ಲಿ ನಾಪತ್ತೆಯಾಗಿದ್ದರು. ಅಗ್ನಿಶಾಮಕದಳ ಹಾಗೂ ಸ್ಥಳೀಯರು ಸೇರಿ ನಡೆಸಿದ ಹುಡುಕಾಟದಲ್ಲಿ ರಾತ್ರಿ 8 ಗಂಟೆ ವೇಳೆ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಕಾಞಂಗಾಡ್ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹವನ್ನಿರಿಸಲಾಗಿದೆ. ಮೃತರು ಪತ್ನಿ ಸಮೀರ, ತಾಯಿ ಲತಾ, ಸಹೋದರ ಸಹೋದರಿಯರಾದ ಮಹೇಶ್, ಲತಿಕಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page