ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಜನಪರ ಸಹಕಾರಿ ವೇದಿಕೆಗೆ ಗೆಲುವು
ಮೀಯಪದವು: ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ನ 2023-28 ನೇ ವರ್ಷದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವ ಣೆಯಲ್ಲಿ ಜನಪರ ಸಹಕಾರೀ ವೇದಿಕೆಗೆ ಗೆಲುವು ಸಾ ದಿಸಿದೆ. ಬಿಜೆಪಿ ಯ ಸಹಕಾರ ಭಾರತಿ ಯ ವಿರುಧ್ದ ಜನಪರ ಸಹಕಾರಿ ವೇದಿಕೆಯ ರಘುನಾಥ ಶೆಟ್ಟಿ, ನಬೀಸತುಲ್ ಮಿಸಿರಿಯ, ಅದ್ರಾಮ ಎಸ್,ಚಂದ್ರಹಾಸ ಸೇನವ, ಹಂಸ ಕುಂಡಿಲ್, ಮಾರ್ಸೆಲ್ ಮೊಂತೆರೋ, ಮೊಯ್ದೀನ್, ಜಿ. ರಾಮ್ ಭಟ್, ಪ್ರೇಮಲತಾ, ಸುಧಾ ಎಸ್, ಉಮೇಶ್ ಟಿ ಗೆಲುವು ಸಾಧಿಸಿದರು. ಜನಪರ ಸಹಕಾರೀ ವೇದಿಕೆಯ ನೇತಾರರಾದ ಬಿ.ಸದಾಶಿವ ರೈ,ವಹೀದ್ ಕೂಡೆಲ್, ಸಿದ್ದೀಕ್ ,ಡಿ. ಕಮಲಾಕ್ಷ, ಜಯರಾಮ ಬಲ್ಲಂಗೂಡೆಲ್,ರಾಮ ಚಂದ್ರ ಟಿ, ಮೊಹಮ್ಮದ್ ಜೆ, ಗಂಗಾಧರ ಕೊಡ್ಡೆ, ಮೊದಲಾದವರು ಮತದಾರರಿಗೆ ಅಭಿನಂದನೆ ಸಲ್ಲಿಸಿದರು.