ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕೋ-ಮಾ-ಲೀ ಮೈತ್ರಿಕೂಟ: ಪಕ್ಷಗಳಲ್ಲಿ ಸೃಷ್ಟಿಯಾದ ಅಸಹನೆ
ಮೀಯಪದವು: ರಾಜ್ಯದಲ್ಲಿ ಸಹಕಾರಿ ವಲಯವನ್ನು ಕೊಳ್ಳೆಹೊಡೆ ಯುವ ಸಿಪಿಎಂನೊಂದಿಗೆ ಜೊತೆಗೂಡಿ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿ ಆಹ್ವಾನ ನೀಡಿದಾಗ ಮೀಂಜ ಪಂಚಾಯತ್ನ ಮೀಯ ಪದವಿನಲ್ಲಿ ಕಾಂಗ್ರೆಸ್ ಮಾರ್ಕಿಸ್ಟ್ ಪಕ್ಷ, ಮುಸ್ಲಿಂಲೀಗ್ನೊಂದಿಗೆ ಸೇರಿ ಮೈತ್ರಿ ಮಾಡಿಕೊಂಡು ವಿರೋಧಪಕ್ಷವನ್ನು ಎದುರಿಸುತ್ತಿದೆ. ಈ ತಿಂಗಳ ೨೯ರಂದು ನಡೆಯುವ ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಈ ಪಕ್ಷಗಳು ಮೈತ್ರಿಮಾಡಿಕೊಂಡು ಸ್ಪರ್ಧಿಸುತ್ತಿದೆ. ಮೈತ್ರಿ ಕೂಟದ ಅಭ್ಯರ್ಥಿಗಳಿಗೆ ನಮ್ಮ ಸಮರ್ಥರಾದ ಉಮೇದ್ವಾರರೆಂದು ಮೈತ್ರಿಕೂಟ ಹಕ್ಕುವಾದ ಮಂಡಿಸಿದೆ. ಇದೇ ವೇಳೆ ಕಾಂಗ್ರೆಸ್ ಮಾರ್ಕಿಸ್ಟ್ ಪಕ್ಷಗಳು, ಲೀಗ್ ಸೇರಿದ ಒಕ್ಕೂಟ ಕೋ-ಮಾ-ಲೀ ಒಕ್ಕೂಟವಾಗಿದೆಯೆಂದು (ಕಾಂಗ್ರೆಸ್-ಮಾರ್ಕಿಸ್ಟ್-ಲೀಗ್) ಸ್ಥಳೀಯರು ನುಡಿಯುತ್ತಾರೆ. ನಿನ್ನೆ ಮೀಯಪದವು ಮಾರ್ಕೆಟ್ ಹಾಲ್ನಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಈ ಪಕ್ಷಗಳ ಮುಖಂಡರ ಜೊತೆ ಕೇರಳ ಕಾಂಗ್ರೆಸ್ ಎಂ. ಮುಖಂಡರು ಭಾಗವಹಿಸಿದ್ದಾರೆ. ಇದು ಊರಿನಲ್ಲಿ ವಿವಾದವಾಗಿದೆ. ಸಭೆಯನ್ನು ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ ಪಿ. ಸೋಮಪ್ಪ ಉದ್ಘಾಟಿಸಿದರು. ಸಿಪಿಎಂ ಮುಖಂಡ ರಾಮಚಂದ್ರ ಅಧ್ಯಕ್ಷತೆ ವಹಿಸಿದರು ಲೀಗ್ನ ಪಂ. ಅಧ್ಯಕ್ಷ ವಾಹೀದ್ ಕೂಡೇಲು ಸ್ವಾಗತಿಸಿದರು. ಕಾಂಗ್ರೆಸ್ ಮಂಡಲ ಅಧ್ಯಕ್ಷರಾಗಿದ್ದ ಇಕ್ಭಾಲ್, ಸಿಪಿಎಂ ಮುಖಂಡರಾದ ಸದಾಶಿವ ರೈ, ಬಾಳಪ್ಪ ಬಂಗೇರ, ಡಿ. ಕಮಲಾಕ್ಷ, ಕೇರಳ ಕಾಂಗ್ರೆಸ್ನ ಮೌರೀಷ್ ಮಾತನಾಡಿದರು.
ಒಕ್ಕೂಟದ ೧೧ ಮಂದಿ ಅಭ್ಯರ್ಥಿಗಳನ್ನು ಜಯಗೊಳಿಸಲು ಒಂದಾಗಿ ಯತ್ನಿಸುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಅಪವಿತ್ರ ಮೈತ್ರಿ ಯಿಂದ ಎಲ್ಡಿಎಫ್-ಯುಡಿಎಫ್ ಒಕ್ಕೂಟಗಳಲ್ಲೂ, ಪಕ್ಷಗಳಲ್ಲೂ ಇಬ್ಭಾಗವಾಗುವ ಸಾಧ್ಯತೆ ಕಂಡುಬಂದಿದೆ.