ಮುಂಡೋಳು ಕ್ಷೇತ್ರದಲ್ಲಿ ನವರಾತ್ರಿ ಪೂಜೆ
ಮುಳ್ಳೇರಿಯ: ಕಾರಡ್ಕ ಮುಂಡೋಳು ಶ್ರೀ ಮಹಾವಿಷ್ಣು ದುರ್ಗಾಪರಮೇಶ್ವರಿ ಶಾಸ್ತಾರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಈ ತಿಂಗಳ ೧೫ರಿಂದ ೨೪ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನವರಾತ್ರಿ ಉತ್ಸವದಂಗವಾಗಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ವಿಶೇಷ ಪೂಜೆ, ಸಂಜೆ ವಿವಿಧ ತಂಡಗಳಿಂದ ಭಜನೆ ನಡೆಯಲಿದೆ. ಜೊತೆಗೆ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಹಾನವಮಿಯಂದು ಆಯುಧ ಪೂಜೆ, ವಾಹನ ಪೂಜೆ ನಡೆಯಲಿದೆ. ವಿದ್ಯಾದಶಮಿಯಂದು ಮಕ್ಕಳಿಗೆ ವಿದ್ಯಾರಂಭ ಮಾಡಲು ಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ನವರಾತ್ರಿಯ ವಿಶೇಷ ದಿನಗಳಲ್ಲಿ ಕ್ಷೇತ್ರದ ಪ್ರಧಾನ ಸೇವೆಯಲ್ಲಿ ಒಂದಾದ ಅಪ್ಪದ ಪೂಜೆ (ಚೆವ್ವಳಕ್) ನಡೆಸಲು ಅವಕಾಶವಿದೆ ಎಂದು ಕ್ಷೇತ್ರದ ಮೊಕ್ತೇಸರರು ತಿಳಿಸಿದ್ದಾರೆ.