ಯುವಕನನ್ನು ಕಾರಿನಲ್ಲಿ ಕರೆದೊಯ್ದು ಕೊಲೆಗೆತ್ನ: 17ರ ಬಾಲಕ ಸಹಿತ ಇಬ್ಬರು ಬಂಧನ
ಕುಂಬಳೆ: ಉಪ್ಪಳ ಬಪ್ಪಾಯಿ ತೊಟ್ಟಿ ಹನಫಿ ಮಸ್ಜಿದ್ ಸಮೀಪದ ಅಮಾನ್ ಮಂಜಿಲ್ನ ಮುಹಮ್ಮದ್ ಫಾರೂಕ್ (೩೫)ರನ್ನು ಮನೆಯಿಂದ ಕರೆದೊಯ್ದು ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಬಳಿಕ ಮನೆಗೆ ತಲುಪಿಸಿ ಉಪೇಕ್ಷಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಬ್ರಾಣ ನಿವಾಸಿ ಕಿರಣ್ ರಾಜ್ (೨೪) ಹಾಗೂ ೧೭ರ ಹರೆಯದ ಇನ್ನೋರ್ವನನ್ನು ಸೆರೆಹಿಡಿ ಯಲಾಗಿದೆ. ಕಿರಣ್ರಾಜ್ ನನ್ನು ನ್ಯಾಯಾಲಯದಲ್ಲಿ ಹಾಜರುಪಡಿ ಸಿದ್ದು ಈ ವೇಳೆ ಅವನಿಗೆ ರಿಮಾಂಡ್ ವಿಧಿಸಲಾಗಿದೆ. ಇದೇ ವೇಳೆ ೧೭ರ ಹರೆಯದ ಬಾಲಕನ ಕುರಿತು ಪೊಲೀ ಸರು ಜುವೈನಲ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಮೊನ್ನೆ ಮುಂಜಾನೆ ೨ ಗಂಟೆ ವೇಳೆ ಬಪ್ಪಾಯಿತೊಟ್ಟಿಯ ಸ್ವಂತ ಮನೆಯಲ್ಲಿ ನಿದ್ರಿಸುತ್ತಿದ್ದ ಮುಹಮ್ಮದ್ ಫಾರೂಕ್ ತನ್ನ ಸಂಬಂಧಿಕನಾದ ಕಡಂಬಾರು ನಿವಾಸಿ ಇರ್ಶಾದ್ ಕಾರಿ ನಲ್ಲಿ ಬಂಬ್ರಾಣಕ್ಕೆ ಕರೆದೊಯ್ದಿದ್ದನು. ಬಂಬ್ರಾಣದ ಬಯಲು ಪ್ರದೇಶ ಬಳಿಯ ಮನೆಯೊಂದರ ಸಮೀಪ ಕಾರು ನಿಲ್ಲಿಸಿ ಮುಹಮ್ಮದ್ ಫಾರೂಕ್ನನ್ನು ಇಳಿಸಿದ್ದು, ಅಷ್ಟರಲ್ಲಿ ಮನೆಯೊಳಗಿ ನಿಂದ ಕಿರಣ್ರಾಜ್ ಹಾಗೂ ಮತ್ತಿಬ್ಬರು ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ಇರ್ಶಾದ್ ಅಲ್ಲಿಂದ ಕಾರಿನಲ್ಲಿ ತೆರಳಿದ್ದನು. ಅನಂತರ ಕಿರಣ್ರಾಜ್ ಕಬ್ಬಿಣದ ಸರಳಿನಿಂದ ಮುಹಮ್ಮದ್ರ ತಲೆ ಹಾಗೂ ದೇಹಾದ್ಯಂತ ಹೊಡೆದಿದ್ದು, ಇನ್ನೋರ್ವ ಪಂಚ್ನಿಂದ ಮುಖಕ್ಕೆ ಗುದ್ದಿದ್ದಾನೆನ್ನಲಾಗಿದೆ. ಇನ್ನೋರ್ವ ಚಾಕುವಿನಿಂದ ಇರಿದಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಮರಳಿ ಬಂದ ಇರ್ಶಾದ್ ಕೂಡಾ ಮುಹಮ್ಮದ್ ಫಾರೂಕ್ಗೆ ಕಬ್ಬಿಣದ ಸರಳಿನಿಂದ ಹೊಡೆದಿದ್ದಾ ನೆನ್ನಲಾಗಿದೆ. ಹಲ್ಲೆಯಿಂದ ಪ್ರಜ್ಞೆ ತಪ್ಪಿದ ಮುಹಮ್ಮದ್ ಫಾರೂಕ್ನನ್ನು ಮರಳಿ ಕಾರಿನಲ್ಲಿ ಹತ್ತಿಸಿ ಬಪ್ಪಾಯಿತೊಟ್ಟಿಯ ಮನೆಗೆ ತಲುಪಿಸಿ ತಂಡ ಪರಾರಿ ಯಾಗಿತ್ತು. ಬೆಳಿಗ್ಗೆ ನೆರೆಮನೆಯವರು ತಲುಪಿ ನೋಡಿದಾಗ ಮುಹಮ್ಮದ್ ಫಾರೂಕ್ ಹಲ್ಲೆಗೀಡಾದ ವಿಷಯ ತಿಳಿದುಬಂದಿದೆ. ಅವರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ಜೀವ ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸ ನಾಲ್ಕು ಮಂದಿ ವಿರುದ್ಧ ಪೊಲೀಸರು ನರಹತ್ಯಾಯತ್ನ ಕೇಸು ದಾಖ ಲಿಸಿಕೊಂಡಿದ್ದಾರೆ. ಈ ಪೈಕಿ ಇದೀಗ ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಯುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.