ಯುವಕನಿಗೆ ಇರಿತ ಆರೋಪಿ ಸೆರೆ
ಕಾಸರಗೋಡು: ಚೆರ್ಕಳ ಪೇಟೆಯ ಬೇಕರಿಯೊಂದರ ಬಳಿ ಚೆರ್ಕಳ ವಡಕ್ಕೇಕರ ಹೌಸ್ನ ಮೊಹಮ್ಮದ್ ತಾಜು ಸಿ.ಎಚ್ (೪೭) ಎಂಬವರನ್ನು ನ.೧ರಂದು ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆಯ ಎಸ್.ಐ ಉಮೇಶನ್. ಇ ಬಂಧಿಸಿದ್ದಾರೆ. ಚೆರ್ಕಳ ಬೇರ್ಕದ ಸಿನಾನ್ (೨೫) ಬಂಧಿತ ಆರೋ ಪಿ. ತನ್ನ ಸ್ನೇಹಿತ ಖಾಲಿದ್ ಎಂ ಬಾತನನ್ನು ಆರೋಪಿ ಹೀಯಾ ಳಿಸಿದ್ದಾನೆಂದೂ, ಅದನ್ನು ನಾನು ಪ್ರಶ್ನಿಸಿದ ದ್ವೇಷದಿಂದ ಆರೋ ಪಿ ತನಗೆ ಇರಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೊಹ ಮ್ಮದ್ ತಾಜು ಆರೋಪಿಸಿದ್ದಾರೆ.