ಯುವಕನ ಮೇಲೆ ಹಲ್ಲೆ: ಇಬ್ಬರ ವಿರುದ್ಧ ಕೇಸು
ಕಾಸರಗೋಡು: ನಿನ್ನೆ ಅಪರಾಹ್ನ ಕೂಡ್ಲು ಎರಿಯಾಲ್ನಲ್ಲಿ ಅಂಗಡಿ ಯಿಂದ ಸಾಮಗ್ರಿ ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದ ಕೂಡ್ಲು ಎರಿಯಾಲ್ನ ನೌಶಾದ್ ಬಿ.ಎ (೩೩) ಎಂಬಾತನ ಮೇಲೆ ಬೈಕ್ನಲ್ಲಿ ಬಂದು ಹಲ್ಲೆ ನಡೆಸಿ ಗಾಯಗೊಳಿಸಿದ ದೂರಿನಂತೆ ಇಬ್ಬರ ವಿರುದ್ಧ ಕಾಸರ ಗೋಡು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಕೂಡ್ಲು ಎರಿಯಾಲ್ ನಿವಾಸಿಗಳಾದ ಫಯಾ ಮತ್ತು ಫಝಲ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.