ರಷ್ಯಾದ ಮ್ಯೂಸಿಕ್ ಕನ್ಸರ್ಟ್ ಹಾಲ್‌ಗೆ ಉಗ್ರರ ದಾಳಿ 60 ಮಂದಿ ಬಲಿ; ನೂರಾರು ಮಂದಿಗೆ ಗಂಭೀರ

ಮಾಸ್ಕೋ: ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಸಭೆ, ಸಮಾರಂಭಗಳು ನಡೆಯುವ ಕನ್ಸರ್ಟ್ ಹಾಲ್‌ಗೆ ಬಂದೂಕುದಾರಿಗಳಾದ ಉಗ್ರರು ನುಗ್ಗಿ ಯದ್ವಾತದ್ವಾ ಗುಂಡಿನ ದಾಳಿ  ನಡೆಸಿ  ೬೦ ಮಂದಿಯನ್ನು ಹತ್ಯೆಗೈದ ಭೀಕರ ಘಟನೆ ನಡೆದಿದೆ. ಈ ದಾಳಿಯಲ್ಲಿ ೧೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಇದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಿನ್ನೆ ತಡರಾತ್ರಿ ಉಗ್ರರು ದಾಳಿ ನಡೆಸಿದ್ದಾರೆ. ವರ್ಷಗಳ ಹಿಂದೆ ಭಾರತದ ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಮಾದರಿಯಲ್ಲೇ ಈ ದಾಳಿ ನಡೆದಿದೆ. ಮಾಸ್ಕೋದ ಪಶ್ಚಿಮ ಭಾಗದಲ್ಲಿರುವ ಕ್ರೊಕಸ್ ಸಿಟಿ ಹಾಲ್‌ನಲ್ಲಿ ದಾಳಿ ನಡೆದಿದೆ.

Leave a Reply

Your email address will not be published. Required fields are marked *

You cannot copy content of this page