ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯಕುತ್ತಿಗೆಯಿಂದ ಸರ ಲಪಟಾವಣೆ

ಕಾಸರಗೋಡು: ದ್ವಿಚಕ್ರ ವಾಹನಗಳಲ್ಲಿ ತಲುಪಿ ಪಾದಚಾರಿಗಳ ಕುತ್ತಿಗೆಯಿಂದ ಚಿನ್ನದ ಸರ ಎಗರಿಸುವ ತಂಡಗಳು ಮತ್ತೆ ಸಕ್ರಿಯಗೊಂಡಿವೆ. ಇದೀಗ ಏಚಿಕೊವ್ವಲ್ ಎಂಬಲ್ಲಿನ ಕೆ. ರಾಮಚಂದ್ರನ್‌ರ ಪತ್ನಿ ಪಿ. ಶಾರದರ ಕುತ್ತಿಗೆಯಿಂದ ಒಂದೂಮುಕ್ಕಾಲು ಪವನ್‌ನ ಚಿನ್ನದ ಸರವನ್ನು ಎಗರಿಸಿದ ಬಗ್ಗೆ ದೂರುಂಟಾಗಿದೆ. ಮೊನ್ನೆ ಸಂಜೆ ೬ ಗಂಟೆ ವೇಳೆ ಮನೆ ಬಳಿಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ತಲುಪಿದ ಇಬ್ಬರು ಶಾರದರ ಕುತ್ತಿಗೆಯಿಂದ ಸರ ಕಸಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಲಭಿಸಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ  ನಡೆಸುತ್ತಿದ್ದಾರೆ.

ಈ ಹಿಂದೆಯೂ ಜಿಲ್ಲೆಯ ವಿವಿಧೆಡೆಗಳಲ್ಲಿ ಇದೇ ರೀತಿಯ ಕೃತ್ಯಗಳು ನಡೆದಿವೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಿಂದ ಚಿನ್ನ ಎಗರಿಸಿದ ಕೃತ್ಯಗಳು ನಡೆದಿದ್ದು, ಈ ಸಂಬಂಧ ಕೆಲವು ಪ್ರಕರಣಗಳಲ್ಲಿ ಮಾತ್ರವೇ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.

Leave a Reply

Your email address will not be published. Required fields are marked *

You cannot copy content of this page