ರಾಜ್ಯಸಭಾ ಸೀಟು ಬೇಡಿಕೆಯಿಂದ ಹಿಂದಕ್ಕಿಲ್ಲ- ಕೇರಳ ಕಾಂಗ್ರೆಸ್(ಎಂ)

ಕೋಟಯಂ: ಕೇರಳದಲ್ಲಿ ತೆರವು ಬೀಳಲಿರುವ ಮೂರು ರಾಜ್ಯಸಭಾ ಸ್ಥಾನಗಳ ಪೈಕಿ ಎಡರಂಗಕ್ಕೆ ಲಭಿಸಲಿರುವ ಎರಡು ಸ್ಥಾನಗಳಲ್ಲಿ ಒಂದನ್ನು ನಮಗೆ ನೀಡಬೇಕೆಂಬ ಬೇಡಿಕೆಯಿಂದ ನಾವು ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಎಡರಂಗದ ಘಟಕ ಪಕ್ಷವಾದ ಕೇರಳ ಕಾಂಗ್ರೆಸ್ (ಎಂ) ಸ್ಪಷ್ಟಪಡಿಸಿದೆ.

ನಾವು ಹೊಂದಿರುವ ಯಾವುದೇ ಸ್ಥಾನವನ್ನೂ ಬಿಟ್ಟುಕೊಡೆವು ಎಂಬ ನಿಲುವನ್ನು ಪಕ್ಷ ವ್ಯಕ್ತಪಡಿಸಿದೆ. ಕೇರಳ ಕಾಂಗ್ರೆಸ್ (ಎಂ)ನ ಅಧ್ಯಕ್ಷ ಜೋಸ್ ಕೆ. ಮಾಣಿಯವರ ರಾಜ್ಯ ಸಭಾ ಸದಸ್ಯತನ ಮುಂದಿನ ತಿಂಗಳು ಕೊನೆಗೊಳ್ಳಲಿದೆ. ಆದ್ದರಿಂದ ಆ ಸ್ಥಾನ ಮತ್ತೆ ನಮಗೇ ಲಭಿಸಬೇ ಕಾಗಿದೆ. ಈ ವಿಷಯದಲ್ಲಿ ಯಾವುದೇ ರೀತಿಯ ಹೊಂದಾಣಿಕೆಗೂ ನಾವು ಸಿದ್ಧರಿಲ್ಲವೆಂದು ಪಕ್ಷದ ನೇತಾರರು ಹೇಳಿದ್ದಾರೆ.

ಜೋಸ್ ಕೆ. ಮಾಣಿಯವರ ಜತೆ ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೊ ವಿಶ್ವಂರ ರಾಜ್ಯಸಭಾ ಸದಸ್ಯತನದ ಅವಧಿಯೂ ಮುಂದಿನ ತಿಂಗಳು ಕೊನೆಗೊಳ್ಳಲಿದೆ. ಆದ್ದರಿಂದ ತೆರವು ಬೀಳುವ ಸ್ಥಾನ ನಮಗೆ ಲಭಿಸಬೇಕೆಂದು ಸಿಪಿಐ ಕೂಡಾ ಹೇಳಿದೆ.

Leave a Reply

Your email address will not be published. Required fields are marked *

You cannot copy content of this page