ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಜಿಲ್ಲೆಗೆ ಹೆಮ್ಮೆ ತಂದ ಎರಡು ಪ್ರಶಸ್ತಿಗಳು
ಕಾಸರಗೋಡು: ೬೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಿದಾಗ ಕನ್ನಡಕ್ಕೆ ಲಭಿಸಿದ ಮಾನ್ಯತೆಯಿಂದ ಜಿಲ್ಲೆಗೂ ಹೆಮ್ಮೆ ಉಂಟಾಗಿದೆ. ರಕ್ಷಿತ್ ಶೆಟ್ಟಿ ನಟಿಸಿದ ‘ಚಾರ್ಲಿ ೭೭೭’ ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಪೀಚರ್ ಫಿಲ್ಮಿ ಗೌರವ ಲಭಿಸಿ ದಾಗ ಅದನ್ನು ನಿರ್ದೇ ಶಿಸಿದ ಕಿರಣ್ರಾಜ್ ಕಾಸರಗೋಡಿನವರು ಎಂಬುದು ಜಿಲ್ಲೆಯ ವರಿಗೆ ಅಭಿಮಾನ ಮೂಡಿಸಿದೆ. ಇದೇ ವೇಳೆ ಸ್ಪೆಷಲ್ ಜ್ಯೂರಿ ಅವಾರ್ಡ್ ಬಾಡೂರು ನಿವಾಸಿ ಬಾ.ನಾ. ಸುಬ್ರಹ್ಮಣ್ಯರಿಗೆ ಲಭಿಸಿದೆ. ಈ ಎರಡು ಪ್ರಶಸ್ತಿಗಳಿಂದಾಗಿ ದೇಶೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಜಿಲ್ಲೆಯೂ ಸ್ಥಾನ ಪಡೆಯಿತು. ಕನ್ನಡಾಭಿಮಾನಿಗಳಿಗೆ ಓಣಂ ಹಬ್ಬದ ಸಂತಸ ಇಮ್ಮಡಿಗೊಳಿಸಿದೆ.