ರೆಸೋರ್ಟ್‌ನ ಮಹಡಿಯಿಂದ ಬಿದ್ದು ಬಾಲಕ ದಾರುಣ ಮೃತ್ಯು

ಇಡುಕ್ಕಿ: ಮೂನಾರ್ ಚಿತ್ತಿರಪುರದಲ್ಲಿ ರೆಸೋರ್ಟ್‌ನ ಆರನೇ ಮಹಡಿಯಿಂದ ಬಿದ್ದು ಒಂಭತ್ತು ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಮದ್ಯಪ್ರದೇಶ ನಿವಾಸಿಯಾದ ಪ್ರಭದಯಾಲ (9) ಮೃತಪಟ್ಟ ಬಾಲಕ ಮೂನಾರ್ ಟೀಕಾಸ್ಟ್ ರೆಸೋರ್ಟ್‌ನಲ್ಲಿ ನಿನ್ನೆ ಮುಂಜಾನೆ ಈ ದುರಂತ ಉಂಟಾಗಿದೆ.

ಗಂಭೀರ ಗಾಯಗೊಂಡ ಬಾಲಕನನ್ನು ಅಂಗಮಾಲಿಯ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಪ್ರಾಣ ರಕ್ಷಿಸಲು ಸಾಧ್ಯವಾಗಲಿಲ್ಲ. ಕುಟುಂಬ ವಾಸಿಸುತ್ತಿದ್ದ ಕೊಠಡಿಯ ಸ್ಲೈಡಿಂಗ್ ಕಿಟಿಕಿ ಮೂಲಕ ಬಾಲಕ ಕೆಳಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಘಟನೆಯಲ್ಲಿ ಇಡುಕ್ಕಿ ವೆಳ್ಳತ್ತುವಲ್ ಪೊಲೀಸರು ಕೇಸು ದಾಖಲಿಸಿದ್ದಾರೆ.

RELATED NEWS

You cannot copy contents of this page