ರೈಲಿನಲ್ಲಿ ಸಾಗಿಸಲಾಗುತ್ತಿದ್ದ ೨.೬ ಕೆಜಿ ಗಾಂಜಾ, ೧ ಲೀಟರ್ ಹ್ಯಾಶಿಸ್ ಆಯಿಲ್ ವಶ: ಇಬ್ಬರ ಸೆರೆ

ಕಾಸರಗೋಡು: ರೈಲಿನಲ್ಲಿ ಸಾಗಿಸುತ್ತಿದ್ದ ೨.೬ ಕಿಲೋ ಗಾಂಜಾ ಹಾಗೂ ಭಾರೀ ಮಾದಕ ದ್ರವ್ಯವಾದ ಒಂದು ಲೀಟರ್ ಹ್ಯಾಶಿಸ್ ಆಯಿಲ್‌ನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಕಣ್ಣೂರು ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ಎಸಿಪಿ) ಕೆ.ವಿ. ವೇಣುಗೋಪಾಲ್‌ರ ನೇತೃತ್ವದ ಪೊಲೀಸರ ತಂಡ ಕಣ್ಣೂರಿನಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ತಲಶ್ಶೇರಿ ಕದಿರೂರು ನಂದಿಯತ್ ಹೌಸ್‌ನ ಕಾಂಚಿ ಬಾವ (೩೮)ನನ್ನು ಕಣ್ಣೂರು ತಾಣದ ಕಸನಕೋಟದ ಸಲ್ಮಾನ್ ಫಾರೀಸ್ (೨೩) ಎಂಬವರನ್ನು ಬಂಧಿಸಲಾಗಿದೆ. ಇವರು ರೈಲಿನಲ್ಲಿ ಈ ಮಾಲು ಸಾಗಿಸುತ್ತಿದ್ದರು. ಆ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಎಸಿಪಿ ನೇತೃತ್ವದ ಪೊಲೀಸರು  ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page