ರೈಲು ಢಿಕ್ಕಿ ಹೊಡೆದು ತಲೆಹೊರೆ ಕಾರ್ಮಿಕ ಮೃತ್ಯು

ಹೊಸದುರ್ಗ: ತಲೆಹೊರೆ ಕಾರ್ಮಿಕ ಉದಿನೂರಿನಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಡಕ್ಕಾವ್ ನಿವಾಸಿ ಟಿ.ವಿ. ಶರತ್ (35) ಮೃತಪಟ್ಟವರು. ನಿನ್ನೆ ಸಂಜೆ ೪ ಗಂಟೆಗೆ ಉದಿನೂರು ರೈಲ್ವೇ ಗೇಟ್ ಸಮೀಪ ಘಟನೆ ನಡೆದಿದೆ. ಚಂದೇರ ಪೊಲೀಸರು ತಲುಪಿ ಮಹಜರು ಪೂರ್ತಿಗೊಳಿಸಿದರು. ಮೃತದೇಹವನ್ನು ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜ್‌ನ ಶವಾಗಾರದ ಲ್ಲಿರಿಸಲಾಗಿದೆ. ದಿ| ಕೆ. ಭಾಸ್ಕರರ ಪುತ್ರನಾಗಿದ್ದಾರೆ. ಮೃತರು ತಾಯಿ ಟಿ.ವಿ. ಉಷಾ, ಪತ್ನಿ ಆದಿರಾ, ಸಹೋದರ ಶನೂಪ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page