ಲಯನ್ಸ್‌ಕ್ಲಬ್‌ನಿಂದ ‘ವೇಸ್ಟ್ ಬಾಟ್ಲಿ ಬೋಟಲ್ ಬಿನ್’ ಸ್ಥಾಪನೆ

ಮುಳ್ಳೇರಿಯ: ಉಪಯೋಗ ಶೂನ್ಯ ಪ್ಲಾಸ್ಟಿಕ್ ಬಾಟ್ಲಿಗಳನ್ನು ಹಾಕಲು ಮುಳ್ಳೇರಿಯ ಲಯನ್ಸ್ ಕ್ಲಬ್ ಪೇಟೆಯಲ್ಲಿ ‘ವೇಸ್ಟ್ ಬೋಟಲ್ ಬಿನ್’ ಸ್ಥಾಪಿಸಿದೆ. ಕಾರಡ್ಕ ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ ಭಟ್‌ರಿಗೆ ಲಯನ್ಸ್ ಡಿಸ್ಟ್ರಿಕ್ ಗವರ್ನರ್ ಟಿ.ಕೆ. ರಜೀಶ್ ಇದನ್ನು ಹಸ್ತಾಂತರಿಸಿದರು. ಶ್ರೀನಿವಾಸ, ಕ್ಲಬ್ ಅಧ್ಯಕ್ಷ ಇ. ವೇಣುಗೋಪಾಲ್, ಜಿಲ್ಲಾ ಕಾರ್ಯದರ್ಶಿ ಕೆ. ವಿನೋದ್ ಕುಮಾರ್, ವಲಯ ಅಧ್ಯಕ್ಷ ಶಾಫಿ ಚೂರಿಪಳ್ಳಂ, ಚಂದ್ರನ್ ಕಾರಡ್ಕ, ಅನೀಶ್ ಕುಮಾರ್ ಎಂ.ವಿ, ವಿನೋದ್ ಮೇಲತ್ತ್, ಕೆ. ರಾಜಲಕ್ಷ್ಮಿ, ಕೆ. ಶೇಖರನ್ ನಾಯರ್, ಟಿ.ಎನ್. ಮೋಹನನ್ ಭಾಗವಹಿಸಿದರು.

You cannot copy contents of this page