ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿ ಇಲಿವಿಷ ಸೇವಿಸಿ ಮೃತ್ಯು

ಕುಂಬಳೆ: ಕೊಲೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ವ್ಯಕ್ತಿ ಇಲಿ ವಿಷ ಸೇವಿಸಿ ಚಿಕಿತ್ಸೆ ಮಧ್ಯೆ ಸಾವಿಗೀಡಾದ ಘಟನೆ ನಡೆದಿದೆ. ಕಾಸರಗೋಡು ಚೌಕಿ ನಿವಾಸಿಯೂ, ಪ್ರಸ್ತುತ ಕುಂಬಳೆ ಮಾವಿನಕಟ್ಟೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಹಬೀಬ್ ಯಾನೆ ಅಭಿಲಾಷ್ (31) ಸಾವಿಗೀಡಾದ ವ್ಯಕ್ತಿಯಾಗಿದ್ದಾನೆ. ಮೂರು ದಿನಗಳ ಹಿಂದೆ  ಈತ  ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಅರೆಪ್ರಜ್ಞಾ ವಸ್ಥೆಯಲ್ಲಿ ಪತ್ತೆಯಾಗಿ ದ್ದನು.ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಪೊಲೀಸರು  ಅಭಿಲಾಷ್‌ನನ್ನು  ಮೊದಲು ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದ್ದರು. ಬಳಿಕ ಸ್ಥಿತಿ ಗಂಭೀರ ವಾಗಿದ್ದ ಹಿನ್ನೆಲೆಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದ್ದರು. ಅಲ್ಲಿ ನಡೆಸಿದ ತಪಾಸಣೆಯಲ್ಲಿ ಈತ ಇಲಿ ವಿಷ ಸೇವಿಸಿರುವುದಾಗಿ ತಿಳಿದು ಬಂದಿತ್ತು. ಇದರಿಂದ ದಾಖಲಿಸಿ ಚಿಕಿತ್ಸೆ ನೀಡಿದ್ದು, ಆದರೆ ಅದು ಫಲಕಾರಿ ಯಾಗದೆ ಇಂದು ಬೆಳಿಗ್ಗೆ  ಸಾವಿಗೀ ಡಾಗಿರು ವುದಾಗಿ  ತಿಳಿದುಬಂದಿದೆ.

ಸಮೂಸ ರಶೀದ್ ಎಂಬವರು  ಕುಂಬಳೆ ಐಎಚ್‌ಆರ್‌ಡಿ ಕಾಲೇಜು ಸಮೀಪ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ  ಹಬೀಬ್ ಯಾನೆ ಅಭಿಲಾಷ್ ಆರೋಪಿ ಯಾಗಿ ದ್ದನೆನ್ನಲಾಗಿದೆ. ಅಲ್ಲದೆ ಈತ ಹಲವು ಪ್ರಕರಣಗಳಲ್ಲಿ ಆರೋಪಿ ಯಾಗಿದ್ದು, ಈ ಹಿನ್ನೆಲೆಯಲ್ಲಿ ೨೦೨೫ರಲ್ಲಿ ಈತನ ವಿರುದ್ದ ಪೊಲೀಸರು ಕಾಪಾ ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು.

RELATED NEWS

You cannot copy contents of this page