ಮಂಜೇಶ್ವರ: ಹೊಸಂಗಡಿ ಪೇಟೆಯಿಂದ ಬಂಗ್ರಮಂಜೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೇ ಮೇಲ್ಸೇತುವೆ ನಿರ್ಮಾಣ ಹಲವು ವರ್ಷಗಳಿಂದ ಬಾಕಿಯಾಗಿದ್ದು, ಇದು ವಾಹನ ಸಂ ಚಾರಕ್ಕೆ ಅಡಚಣೆಯಾಗಿ ಪರಿಣಮಿಸಿದೆ. ವಾಹನಗಳ ದಟ್ಟಣೆಯಿಂದ ರಾಷ್ಟ್ರೀಯ ಹೆದ್ದಾರಿ ಮುಚ್ಚುಗಡೆಯಾಗುತ್ತಿದ್ದು, ಇದರ ಪರಿಹಾರಕ್ಕಾಗಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ತುರ್ತಾಗಿ ನಡೆಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಲು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಹಾಸಭೆಯಲ್ಲಿ ಠರಾವು ಮಂಡಿಸಲಾಯಿತು. ಸಭೆಯಲ್ಲಿ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸಿದರು. ಈ ವೇಳೆ ಶಾಸಕ ಎಕೆಎಂ ಅಶ್ರಫ್‌ರನ್ನು ಸನ್ಮಾನಿಸಲಾ ಯಿತು.ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ, ಸದಸ್ಯ ಇಲ್ಯಾಸ್, ದಯಾ ನಂದ ಬಂಗೇರ, ಸತ್ಯೋಜಿತ್, ಸುದರ್ಶನ, ಕುಮುದರಾಜ್, ಹಸೈನಾರ್ ಮಾಡ, ಜಬ್ಬಾರ್ ಉಪ್ಪಳ, ಸಲಾಂ, ಬಾವಮಿಯ ಮೊದಲಾದವರು ಮಾತನಾಡಿದರು. ಹಮೀದ್ ಹೊಸಂಗಡಿ ಸ್ವಾಗತಿಸಿ, ಸುದರ್ಶನ ವಂದಿಸಿದರು.






