ಎಪ್ಲಸ್ ಪಡೆದ ವಿದ್ಯಾರ್ಥಿನಿಗೆ ಬಿಜೆಪಿಯಿಂದ ಅಭಿನಂದನೆ

ಬದಿಯಡ್ಕ: ಪೆರಡಾಲ ಹದಿಮೂರನೇ ವಾರ್ಡ್ ಬಿಜೆಪಿ ಸಮಿತಿಯ ವತಿಯಿಂದ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯ ಗಳಲ್ಲಿ ಎ ಪ್ಲಸ್ ಪಡೆದ ಬೀಜಂತಡ್ಕ ಇಳಂತೋಡಿ ಕಿರಣ-ರೇಖ ದಂಪತಿ ಪುತ್ರಿ, ನವಜೀವನ ಹೈಸ್ಕೂಲ್ ವಿದ್ಯಾರ್ಥಿನಿ ರೋಷಿಕಾ ಕಿರಣ್‌ಳನ್ನು ಅಭಿನಂದಿಸಲಾಯಿತು.
ವಾರ್ಡ್ ಸಮಿತಿ ಅಧ್ಯಕ್ಷ, ಹಿರಿಯ ಬಿಜೆಪಿ ಕಾರ್ಯಕರ್ತ ಎಂ. ನಾರಾಯಣ ಭಟ್ ಮೈರ್ಕಳ ಹಾಗೂ ಬದಿಯಡ್ಕ ಪಂ, ಉಪಾಧ್ಯಕ್ಷೆ, ಅಶ್ವಿನಿ ಕೆ.ಯಂ. ಜಂಟಿಯಾಗಿ ಗೌರವಿಸಿದರು. ವಾರ್ಡ್ ಸಮಿತಿ ಪ್ರಧಾನ ಕಾರ್ಯ ದರ್ಶಿ ನಾರಾಯಣ ಪಿ ಪೆರಡಾಲ, ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿ ದ್ದರು. ರಾಮಚಂದ್ರ ಮಣಿಯಾಣಿ ಸ್ವಾಗತಿಸಿ, ನಾರಾಯಣ ಮಣಿಯಾಣಿ ಇಳಂತೋಡಿ ವಂದಿಸಿದರು.

You cannot copy contents of this page