ಕಾಸರಗೋಡು: ಇಲಿವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಳು. ಚೆರ್ವತ್ತೂರು ಕೈದಕ್ಕಾಡ್ ಪಯ್ಯಂಗಿ ಬಿಸ್ಮಿಲ್ಲ ರಸ್ತೆಯ ನಿವಾಸಿ ಅಬ್ದುಲ್ ರಹ್ಮಾನ್‌ರ ಪುತ್ರಿ ಮುಬಶಿರ (19) ಮೃತಪಟ್ಟ ವಿದ್ಯಾರ್ಥಿನಿ. ಈ ತಿಂಗಳ 2ರಂದು ಮನೆಯಲ್ಲಿ ಈಕೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ ನಿಧನ ಸಂಭವಿಸಿದೆ. ಕೈದಕ್ಕಾಡ್ ಅಲ್‌ವರ್ದ ವುಮನ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಳು. ಮೃತಳು ತಾಯಿ ಯು.ಎಂ. ಫಾತಿಮ,ಸಹೋದರರಾದ ಫಾಯಿಸ, ರಾಶಿದ, ಸಲ್ಮಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.






