ವಯನಾಡು ದುರಂತ: ಯುಡಿಎಫ್ ಸಂಸದರಿಂದ ಸಂಸತ್ ಮುಂದೆ ಪ್ರತಿಭಟನೆ
ದೆಹಲಿ: ವಯನಾಡು ಭೂಕುಸಿತ ದುರಂತ ಸಂತ್ರಸ್ತರಿಗೆ ಕೇಂದ್ರ ಸರಕಾರ ಸೂಕ್ತ ನಷ್ಟ ಪರಿಹಾರ ನೀಡಿಲ್ಲವೆಂದು ದೂರಿ ಕೇರಳದ ಯುಡಿಎಫ್ ಸಂಸದರು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಸಂಸತ್ ಮುಂದೆ ಪ್ರತಿಭಟನೆ ನಡೆಸಿದೆ. ವಯನಾಡು ದುರಂತಕ್ಕೆ ನಷ್ಟ ಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ವಿಳಂಬತೋರುತ್ತಿದೆಯೆಂದೂ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.