ವಯನಾಡು ಸಂತ್ರಸ್ತರಿಗಾಗಿ ಮಂಜೇಶ್ವರ ಪಂ. ಸಂಗ್ರಹಿಸಿದ ಆಹಾರ ಸಾಮಗ್ರಿಗಳು ಉಪಯೋಗಶೂನ್ಯ
ಮಂಜೇಶ್ವರ: ವಯನಾಡು ದುರಂತದಿಂದ ಸಂತ್ರಸ್ತರಾದ ಮಂದಿಯ ನೆರವಿಗಾಗಿ ಮಂಜೇಶ್ವರ ಪಂಚಾ ಯತ್ನ ನೇತೃತ್ವದಲ್ಲಿ ಸಾರ್ವಜನಿ ಕರಿಂದ ಸಂಗ್ರಹಿಸಲಾದ ಆಹಾರ ಸಾಮಗ್ರಿಗಳು ಪಂಚಾಯತ್ ಕಚೇರಿ ಬಳಿ ಕೊಳೆತು ಹಾನಿಯಾಗುತ್ತಿ ರುವುದಾಗಿ ಆರೋಪಿಸಲಾಗಿದೆ. ಇದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣ ವಾಗಿದೆ. ಸಂತ್ರಸ್ತರಿಗೆ ತಲುಪಿಸಬೇಕಾದ ಆಹಾರ ಸಾಮಗ್ರಿಗಳನ್ನು ಪಂಚಾಯತ್ ಕಚೇರಿಯಲ್ಲೇ ದಾಸ್ತಾನು ಇರಿಸಿರುವುದು ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಇವುಗಳಲ್ಲಿ ಹೆಚ್ಚಿನವು ಕೊಳೆತು ನಾರುತ್ತಿವೆ. ವಯನಾಡು ಸಂತ್ರಸ್ತರಿಗೆ ಸೂಕ್ತ ಸಮಯದಲ್ಲಿ ತಲುಪಿಸಬೇಕಾಗಿರುವುದರಲ್ಲಿ ಆಡಳಿತ ಸಮಿತಿ ವಿಫಲತೆಹೊಂದಿರುವುದಾಗಿ ಸ್ಥಳೀಯರು ಆರೋಪಿಸುತ್ತಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಆಡಳಿತ ಜನಪ್ರತಿನಿಧಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿ ದ್ದಾರೆ. ಈ ವಿಷಯದಲ್ಲಿ ಪ್ರತಿಕ್ರಿಯಿಸಿದ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಕ್ ಪಂಚಾಯತ್ ಸಂಗ್ರಹಿಸಿದ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲು ಮುಂದಾದಾಗ ಈಗ ಯಾವುದೇ ಸಾಮಗ್ರಿಗಳನ್ನು ಕಳುಹಿಸುವುದು ಬೇಡವೆಂದು ವಯನಾಡ್ ಜಿಲ್ಲಾಧಿಕಾರಿ ತಿಳಿಸಿದ ಹಿನ್ನೆಲೆಯಲ್ಲಿ ಈ ಸಾಮಗ್ರಿಗಳನ್ನು ಅಲ್ಲಿಗೆ ಕಳುಹಿಸಲಾಗಿಲ್ಲ. ಆದರೆ ಓಣಂಗೆ ಮುಂಚಿತವಾಗಿ ಇದನ್ನು ವಯನಾಡಿಗೆ ಕಳುಹಿಸಿಕೊಡುವು ದಾಗಿ ಅವರು ತಿಳಿಸಿದ್ದಾರೆ.