ವಯನಾಡು ಸಂತ್ರಸ್ತರ ಸಹಾಯಕ್ಕಾಗಿ ಖಾಸಗಿ ಬಸ್ ಮಾಲಕರಿಂದ 22ರಂದು ನಿಧಿ ಸಂಗ್ರಹ ಸಾಂತ್ವನ ಯಾತ್ರೆ
ಕಾಸರಗೋಡು: ವಯನಾಡ್ನ ಪ್ರಾಕೃತಿಕ ದುರಂತಕ್ಕೊಳಪಟ್ಟು 400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಇನ್ನೂ ನಾಪತ್ತೆಯಾಗಿ, ಎರಡು ಗ್ರಾಮಗಳೇ ಸಂಪೂರ್ಣವಾಗಿ ಪ್ರವಾಹದಲ್ಲಿ ಕೊಚ್ಚಿಹೋಗಿ ಆ ಮೂಲಕ ಸಂತ್ರಸ್ತರಾಗಿರುವವರಿಗೆ ಸಹಾಯವೊದಗಿಸಲು ಕೇರಳ ಸ್ಟೇಟ್ ಪ್ರೈವೇಟ್ ಬಸ್ ಓನರ್ಸ್ ಫೆಡರೇಶನ್ನ ನೇತೃತ್ವದಲ್ಲಿ ಈ ತಿಂಗಳ 22ರಂದು ಜಿಲ್ಲೆಯ ಎಲ್ಲಾ ಖಾಸಗಿ ಬಸ್ಗಳು ಧನಸಹಾಯ ಸಂಗ್ರಹಕ್ಕಾಗಿ ಸಾಂತ್ವನ ಯಾತ್ರೆ ನಡೆಸಲಿದೆ ಎಂದು ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋ ಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಗಿರೀಶ್ ಕೆ. ಮತ್ತು ಪ್ರಧಾನ ಕಾರ್ಯ ದರ್ಶಿ ಟಿ. ಲಕ್ಷ್ಮಣನ್ ತಿಳಿಸಿದ್ದಾರೆ.
ಅಂದು ಸಂಗ್ರಹವಾಗುವ ಹಣವನ್ನು ಸಂಘಟನೆಯ ರಾಜ್ಯ ಸಮಿತಿಗೆ ಹಸ್ತಾಂತರಿಸಲಾಗುವುದು. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಫೆಡರೇಶನ್ ಇಂತಹ ನಿಧಿಸಂಗ್ರಹ ಸಾಂತ್ವನ ಯಾತ್ರೆ ನಡೆಸಲು ತೀರ್ಮಾನಿಸಿದೆ. ಈ ನಿಧಿ ಬಳಸಿ ವಯನಾಡು ಸಂತ್ರಸ್ತರಿಗಾಗಿ ೨೫ ಮನೆಗಳನ್ನು ನಿರ್ಮಿಸಿಕೊಡ ಲಾಗುವುದು. ಹೀಗೆ ಸಂಗ್ರಹಿಸಲಾಗುವ ನಿಧಿ ಸಂಗ್ರಹ ಸಾಂತ್ವನ ಯಾತ್ರೆಯಲ್ಲಿ ಬಸ್ ಪ್ರಯಾಣಿಕರು ಹಾಗೂ ಸಾರ್ವ ಜನಿಕರು ಪಾಲ್ಗೊಂಡು ವಯನಾಡ್ನ ಸಂತ್ರಸ್ತರ ಕಣ್ಣೀರು ಒರೆಸಲು ಮುಂದಾಗ ಬೇಕು. ಮಾತ್ರವಲ್ಲ, ಸಾರ್ವಜನಿಕರು ತಮ್ಮ ಸ್ವಂತ ವಾಹನಗಳನ್ನು ಉಪಯೋಗಿಸದೆ ಅಂದು ಬಸ್ನಲ್ಲೇ ಪ್ರಯಾಣ ನಡೆಸುವಂತೆಯೂ, ಎಲ್ಲಾ ವಿದ್ಯಾರ್ಥಿ ಗಳೂ ಇದರೊಂದಿಗೆ ಕೈಜೋಡಿಸಿ ವಯನಾಡ್ನ ಸಂತ್ರಸ್ತರಿಗೆ ಅಗತ್ಯದ ಸಹಾಯವನ್ನು ನೀಡಬೇಕು. ಆ ಮೂಲಕ ವಯನಾಡ್ನ ಜನತೆಗಾಗಿ ರುವ ಈ ಯಾತ್ರೆಯನ್ನು ಯಶಸ್ವಿಗೊಳಿ ಸಲು ಎಲ್ಲರೂ ಸಹಕರಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಫೆಡರೇಶನ್ನ ಉಪಾಧ್ಯಕ್ಷ ಮೊಹಮ್ಮದ್ ಕುಂಞಿ ಪಿ.ಎ, ಜತೆ ಕಾರ್ಯದರ್ಶಿ ಪಿ. ಸುಕುಮಾರನ್, ಸಿ.ಎ. ಮೊಹಮ್ಮದ್ ಕುಂಞಿ, ಪ್ರದೀಪ್ ಕುಮಾರ್ ಮೊದಲಾದವರು ಭಾಗವಹಿಸಿ ಮಾಹಿತಿ ನೀಡಿದರು.