ನಿಧನ: ಮಂಗಲ್ಪಾಡಿ ಸೇವಾಭಾರತಿ ಕಾರ್ಯಕರ್ತರಿಂದ ಅಂತ್ಯಸಂಸ್ಕಾರ

ಉಪ್ಪಳ: ದೈಗೋಳಿ ಸಾಯಿ ನಿಕೇತನ ಸೇವಾಶ್ರಮದಲ್ಲಿ ನಿಧನರಾದ ವಾರೀಸುದಾರರಿಲ್ಲದ ಮೃತದೇಹಕ್ಕೆ ಮಂಗಲ್ಪಾಡಿ ಸೇವಾಭಾರತಿ ಕಾರ್ಯಕರ್ತರು ಅಂತ್ಯಸAಸ್ಕಾರ ನಡೆಸಿದರು. ನೀಲಾ ನಾಯಕ್ ಲಮಾಣಿ [60] ಎಂಬವರು ನಿಧನಹೊಂದಿದ್ದರು. ಕಳೆದ 10 ದಿನಗಳ ಹಿಂದೆ ವರ್ಕಾಡಿ ಸುಂಕದಕಟ್ಟೆ ಬಸ್ ತಂಗುದಾಣ ಪರಿಸರದಲ್ಲಿ ಈ ವ್ಯಕ್ತಿ ಅಸೌಖ್ಯದಿಂದ ಪತ್ತೆಯಾಗಿದ್ದು, ಊರವರು ನೀಡಿದ ಮಾಹಿತಿಯಂತೆ ಆಶ್ರಮದ ಸಿಬ್ಬಂದಿ ತಲುಪಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ನಾಲ್ಕು ದಿನಗಳ ಬಳಿಕ ಆಶ್ರಮಕ್ಕೆ ಕರೆತಂದಿದ್ದು, ಆಶ್ರಮದಲ್ಲಿ ವೈದ್ಯರ ಆರೈಕೆಯಲ್ಲಿದ್ದರು. ಆದರೆ ಶನಿವಾರ ಬೆಳಿಗ್ಗೆ ನಿಧನ ಹೂಂದಿದ್ದಾರೆ. ವಾರೀಸುದಾರರಿಲ್ಲದ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಸೇವಾಭಾರತಿ ಕಾರ್ಯಕರ್ತರು ಚೆರುಗೋಳಿ ಹಿಂದೂರುದ್ರ ಭೂಮಿಯಲ್ಲಿ ಮೃತದೇಹದ ಅಂತ್ಯಸAಸ್ಕಾರ ನಡೆಸಿದರು.

You cannot copy contents of this page