ವರದಕ್ಷಿಣೆ ನೀಡಲಾಗದೆ ಯುವ ವೈದೆ ಆತ್ಮಹತ್ಯೆಗೈದ ಪ್ರಕರಣ: ವೈದ್ಯನಿಗೆ ಜೈಲು

ತಿರುವನಂತಪುರ: ಮದುವೆ ಯಾಗುವುದಾಗಿ ಭರವಸೆಯೊಡ್ಡಿ ಬಳಿಕ ಭಾರೀ ವರದಕ್ಷಿಣೆ ಬೇಡಿಕೆಯೊಡ್ಡಿದ ಪರಿಣಾಮ ಯುವ ವೈದ್ಯೆ ಆತ್ಮಹತ್ಯೆಗೈದ ಪ್ರಕರಣದಲ್ಲಿ ಯುವ ವೈದ್ಯ ಸೆರೆಗೀಡಾಗಿದ್ದಾನೆ.

ಕೊಲ್ಲಂ ಶಕ್ತಿಕುಳಂಗರ ನಿವಾಸಿ ಡಾ| ರುವೈಸ್‌ನನ್ನು ವರದಕ್ಷಿಣೆ ನಿಯಮ ಪ್ರಕಾರ ತಿರುವನಂತಪುರ ಪೊಲೀಸರು ಬಂಧಿಸಿದ್ದಾರೆ.  ತಿರುವನಂತಪುರ ಮೆಡಿಕಲ್ ಕಾಲೇಜಿನ ಪಿ.ಜಿ ವಿದ್ಯಾರ್ಥಿನಿಯಾದ ಡಾ| ಶಹನರ ಆತ್ಮಹತ್ಯೆಗೆ ಸಂಬಂಧಿಸಿ  ರುವೈಸ್‌ನನ್ನು ಬಂಧಿಸಲಾಗಿದೆ. ಡಾ| ಶಹನರನ್ನು ಮದುವೆಯಾಗುವುದಾಗಿ ಡಾ| ರುವೈಸ್ ಭರವಸೆ ನೀಡಿದ್ದಾನೆನ್ನಲಾ ಗಿದೆ. ಬಳಿಕ ೧೫೦ ಪವನ್ ಚಿನ್ನಾಭರಣ, ಬಿಎಂಡಬ್ಲ್ಯು ಕಾರು, ಒಂದೂವರೆ ಕೋಟಿ ರೂಪಾಯಿ, ಒಂದು ಎಕರೆ ಸ್ಥಳವನ್ನು ವರದಕ್ಷಿಣೆಯಾಗಿ ನೀಡಬೇಕೆಂದು ರುವೈಸ್  ಬೇಡಿಕೆಯೊಡ್ಡಿದ್ದನೆನ್ನ ಲಾಗಿದೆ. ಆದರೆ ಇಷ್ಟೆಲ್ಲಾ ನೀಡಲು ಸಾಧ್ಯವಾಗದುದರಿಂದ ಡಾ| ಶಹನಾ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆ ಮುಂಚಿತ ಬರೆದಿಟ್ಟ ಪತ್ರದಲ್ಲಿ ಕಾರಣವನ್ನು ಬರೆದಿಟ್ಟಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಡಾ| ರುವೈಸ್ ತಲೆಮರೆಸಿಕೊಂಡಿದ್ದನು.  ಕರುನಾಗ ಪಳ್ಳಿಯ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಬಂಧಿಸಲಾಗಿದೆ.  ಆತನ ವಿರುದ್ಧ ವರದಕ್ಷಿಣೆ ನಿಷೇಧ ನಿಯಮ, ಆತ್ಮಹತ್ಯೆ ಪ್ರೇರಣೆ ಎಂಬೀ ಕಾಯ್ದೆಗಳ ಪ್ರಕಾರ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ. ಬಂಧಿತ ರುವೈಸ್‌ಗೆ ತಿರುವನಂತ ಪುರ ಅಡಿಶನಲ್ ಚೀಫ್ ಜ್ಯುಡೀ ಶಿಯಲ್ ಮೆಜಿಸ್ಟ್ರೇಟ್ ನ್ಯಾಯಾ ಲಯ ೧೪ ದಿನಗಳ ರಿಮಾಂಡ್ ವಿಧಿ ಸಿದೆ. ಇದರಿಂದ ರುವೈಸ್‌ನನ್ನು ಪೂಜಾಪುರ ಸೆಂಟ್ರಲ್ ಜೈಲಿನಲ್ಲಿರಿಸಲಾಗಿದೆ. 

Leave a Reply

Your email address will not be published. Required fields are marked *

You cannot copy content of this page