ವಾಹನಗಳಲ್ಲಿ ಸಾಗಿಸುತ್ತಿದ್ದ 4,82,514 ಪ್ಯಾಕೆಟ್ ತಂಬಾಕು ಉತ್ಪನ್ನ ವಶ; ಇಬ್ಬರ ಬಂಧನ
ಕುಂಬಳೆ: ವಾಹನಗಳಲ್ಲಿ ಸಾಗಿಸುತ್ತಿದ್ದ 4,82,514 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿದೆ. ಈ ಸಂಬಂಧ ಕಲ್ಲಿಕೋಟೆ ವೆಳ್ಳಿಪರಂಬ್ ಕುಟ್ಟಮುಚ್ಚಿ ಕ್ಕಾಲ್ನ ಎನ್.ಪಿ. ಅಸ್ಕರ್ ಅಲಿ 36), ಕಲ್ಲಿಕೋಟೆ ಪನ್ನಿಯಾಂಕರ ಪಯನಾಕ್ಕಲ್ ಸೀನತ್ ಹೌಸ್ನ ಸಾದಿಕ್ ಅಲಿ (41) ಎಂಬಿ ವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಅಸ್ಕರ್ ಅಲಿಯನ್ನು ನಿನ್ನೆ ರಾತ್ರಿ 9.45ರ ವೇಳೆ ಮೊಗ್ರಾಲ್ನಿಂದ ಎಸ್ಐ ವಿ.ಕೆ. ವಿಜಯನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಸಿವಿಲ್ ಪೊಲೀಸ್ ಆಫೀಸರ್ಗಳಾದ ಚಂದ್ರನ್, ಹರಿಶ್ರೀ ಎಂಬಿವರು ಎಸ್ಐ ಜತೆ ಕಾರ್ಯಾ ಚರಣೆ ತಂಡದಲ್ಲಿದ್ದರು. ಪಿಕಪ್ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ 3,12,000 ಪ್ಯಾಕೆಟ್ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ.
ಸಾದಿಕ್ ಅಲಿಯನ್ನು ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್ಐ ಕೆ. ಶ್ರೀಜೇಶ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಈತನಿದ್ದ ಪಿಕಪ್ ವಾಹನದಲ್ಲಿ ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ 1.70,514 ಪ್ಯಾಕೆಟ್ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಸಿಪಿಒಗಳಾದ ವಿನೋದ್, ಮನು ಎಂಬಿವರು ಕಾರ್ಯಾಚರಣೆ ತಂಡದಲ್ಲಿದ್ದರು. ಈ ತಂಬಾಕು ಉತ್ಪನ್ನಗಳನ್ನು ಕರ್ನಾಟಕದಿಂದ ಕಲ್ಲಿಕೋಟೆಗೆ ಸಾಗಿಸಲಾಗುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಅಲ್ಪ ಕಾಲದಲ್ಲಿ ನಡೆದ ಅತೀ ದೊಡ್ಡ ಪಾನ್ ಮಸಾಲೆ ಬೇಟೆ ಇದಾಗಿದೆ. ವಶಪಡಿಸಿಕೊಂಡ ಉತ್ಪನ್ನಗಳಿಗೆ ೫೦ ಲಕ್ಷರೂಪಾಯಿ ಮೌಲ್ಯ ಅಂದಾಜಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.