ವಾಹನ ಸಂಚಾರ ನಿಷೇಧ
ಬೋವಿಕ್ಕಾನ: ಬೇತೂರ್ಪಾರ ಪರಪ್ಪ ಲಿಂಕ್ ರೋಡಿನ ದುರಸ್ತಿ ನಡೆಯುತ್ತಿ ರುವುದರಿಂದ ಮುಂದಿನ ಸೂಚನೆ ಬರುವವರೆಗೂ ಈ ದಾರಿಯಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಪಲ್ಲಂಜಿ ಕಡೆಯಿಂದ ಬೇತೂರ್ ಪಾರ ಕಡೆಗೆ ಹೋಗುವ ವಾಹನಗಳು ಪರಪ್ಪ ವನಂಗಾಡ್ ಚೊಟ್ಟಂತ್ತೋಲ್ ಮೂಲಕ ಮತ್ತು ಕುತ್ತಿಕೋಲ್ ಕಡೆಗೆ ಹೋಗುವ ವಾಹನಗಳು ಕಾವುಂಗಲ್ ಚಾಯಿತ್ತಡ್ಕ ಮೂಲಕ ಸಂಚರಿಸಬೇ ಕೆಂದು ಕೆ.ಆರ್.ಎಫ್.ಬಿ- ಪಿ.ಎಂ.ಯು ವಿಭಾಗ ಕಾಸರಗೋಡು ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.