ವಿದ್ಯಾರ್ಥಿಗಳ ಮುಂದೆ ನಗ್ನತೆ ಪ್ರದರ್ಶನ: ಆರೋಪಿಗಾಗಿ ಶೋಧ
ಮಂಜೇಶ್ವರ: ಶಾಲಾ ವಿದ್ಯಾರ್ಥಿಗಳ ಮುಂದೆ ಯುವಕನೋರ್ವ ನಗ್ನತೆ ಪ್ರದರ್ಶಿಸಿದ ಬಗ್ಗೆ ದೂರಲಾಗಿದೆ. ಮಂಜೇಶ್ವರ ಠಾಣೆ ವ್ಯಾಪ್ತಿಯ ಶಾಲೆಯೊಂದರ ಸಮೀಪಕ್ಕೆ ನಿನ್ನೆ ಸಂಜೆ ೩.೩೦ರ ವೇಳೆ ಸ್ಕೂಟರ್ನಲ್ಲಿ ತಲುಪಿದ ಯುವಕ ಈ ಕೃತ್ಯವೆಸಗಿದ್ದಾನೆ. ವಿದ್ಯಾರ್ಥಿಗಳು ನೀಡಿದ ಮಾಹಿತಿ ಮೇರೆಗೆ ಶಾಲೆಯ ಪ್ರಾಂಶುಪಾಲರು ಹಾಗೂ ಪಿಟಿಎ ಪದಾಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶಾಲೆ ಸಮೀಪದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋ ಪಿಗಾಗಿ ಶೋಧ ನಡೆಸುತ್ತಿದ್ದಾರೆ.