ವಿದ್ಯುತ್ ತಂತಿ ಮೇಲೆ ಬಿದ್ದ ಮರದ ರೆಂಬೆ
ಮೊಗ್ರಾಲ್: ಇಂದು ಮುಂಜಾನೆ ಬೀಸಿದ ಗಾಳಿ ಹಾಗೂ ಮಳೆಗೆ ಮೊಗ್ರಾಲ್ ನಾಂಗಿ ರಸ್ತೆಯಲ್ಲಿ ಮರದ ರೆಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಇದರಿಂದ ಈ ಪರಿಸರ ದಲ್ಲಿ ವಿದ್ಯುತ್ ಮೊಟಕುಗೊಂಡಿದೆ. ಅಲ್ಲದೆ ನಾಂಗಿ ರಸ್ತೆಯಲ್ಲಿ ಸಾರಿಗೆ ಅಡ ಚಣೆಯೂ ಉಂಟಾಯಿತು. ವಿಷಯ ತಿಳಿದು ವಾರ್ಡ್ ಸದಸ್ಯ ರಿಯಾಸ್ ಮೊಗ್ರಾಲ್ ಕೂಡಲೇ ಕೆಎಸ್ಇಬಿ ಅಧಿಕಾರಿಗಳಿಗೆ ವಿಷಯ ತಿಳಿಸಿ ಆ ಭಾಗಕ್ಕಿರುವ ವಿದ್ಯುತ್ ಸಂಪರ್ಕ ವಿಚ್ಛೇಧಿಸಲಾಯಿತು. ಅನಂತರ ವಾರ್ಡ್ ಸದಸ್ಯನ ನೇತೃತ್ವದಲ್ಲಿ ತಕ್ವಾನಗರ್ ನಿವಾಸಿಗಳು ಸೇರಿ ಮರದ ರೆಂಬೆಗಳನ್ನು ತೆರವುಗೊಳಿಸಿ ರಸ್ತೆಯಲ್ಲಿ ವಾಹನ ಸಂ ಚಾರ ಸುಗಮಗೊಳಿಸಿದರು. ಬಳಿಕ ವಿದ್ಯು ತ್ ಸಂಪರ್ಕ ಮರುಸ್ಥಾಪಿಸಲಾಯಿತು.