ವಿಪಕ್ಷ ಸಂಘಟನೆ ನೌಕರರಿಂದ ನಾಳೆ ಮುಷ್ಕರ: ಡಯಸ್ನೋನ್ ಘೋಷಿಸಿದ ಸರಕಾರ
ತಿರುವನಂತಪುರ: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ರಾಜ್ಯದಲ್ಲಿ ವಿಪಕ್ಷ ಸಂಘಟನೆಗಳ ನೌಕರರು ನಾಳೆ ಮುಷ್ಕರ ನಡೆಸು ವರು. ನೀಡಲು ಬಾಕಿಯಿರುವ ಡಿಎ ಕೂಡಲೇ ಮಂಜೂರು ಮಾಡಬೇಕು, ಲೀವ್ ಸರಂಡರ್ ಮರುಸ್ಥಾಪಿ ಸಬೇಕು, ವೇತನ ಪರಿಷ್ಕರಣೆ ಮಂಜೂರು ಮಾಡಬೇಕು, ಪಾಲುದಾರಿಕಾ ಪಿಂಚಣಿ ಹಿಂತೆಗೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ನೌಕರರ ಮುಷ್ಕರವನ್ನು ವಿರೋಧಿಸಿ ಸರಕಾರ ಡಯಸ್ನೋನ್ ಘೋಷಿಸಿದೆ. ಮುಷ್ಕರ ನಡೆಸುವ ನೌಕರರ ವೇತನ ಕಡಿತಗೊಳಿಸುವುದಾಗಿ ಸಾರ್ವಜನಿಕ ಆಡಳಿತ ಇಲಾಖೆ ತಿಳಿಸಿದೆ. ಅನುಮತಿಯಿಲ್ಲದೆ ಹಾಜರಾಗದ ತಾತ್ಕಾಲಿಕ ನೌಕರರನ್ನು ಸೇವೆಯಿಂದ ತೆಗೆದುಹಾಕಲಾಗುವುದೆಂದೂ ತಿಳಿಸಲಾಗಿದೆ. ಇದೇ ವೇಳೆ ನಾಳೆ ನೌಕರರಿಗೆ ರಜೆ ಮಂಜೂರು ಮಾಡುವುದಕ್ಕೆ ಕಠಿಣ ನಿಯಂತ್ರಣ ಹೇರಲಾಗಿದೆ. ನೌಕರ ಅಥವಾ ಹತ್ತಿರದ ಸಂಬಂಧಿಕರು ಅಸೌಖ್ಯ ಬಾಧಿತರಾದರೆ, ನೌಕರರ ಪರೀಕ್ಷೆ ಸಂಬಂಧ ಅಗತ್ಯಗಳಿಗೆ, ಹೆರಿಗೆ ಅಗತ್ಯಗಳಿಗೆ ಅಲ್ಲದೆ ಬೇರೆ ಯಾವುದೇ ಅಗತ್ಯಕ್ಕೆ ರಜೆ ಮಂಜೂರು ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.