ವಿವಿಧೆಡೆ ಅಬಕಾರಿ ಕಾರ್ಯಾಚರಣೆ: ಗಾಂಜಾ, ವಾಶ್, ಮದ್ಯ ಸಹಿತ ಮೂವರ ಸೆರೆ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಕಾಸರಗೋಡಿನ ವಿವಿಧ ಕೇಂದ್ರ ಗಳಲ್ಲಿ ವ್ಯಾಪಕವಾಗಿ ಕಾರ್ಯಾಚರಣೆ ನಡೆಸಿ ಗಾಂಜಾ, ವಾಶ್ ಮತ್ತು ಕರ್ನಾ ಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪ ಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಮೂವರನ್ನು ಬಂಧಿಸಲಾಗಿದೆ.
ಅಡೂರು ಗ್ರಾಮದ ನೇರ್ಲಕಯದ ಮನೆಯೊಂದರ ಶೆಡ್ಗೆ ಬದಿಯಡ್ಕ ಎಕ್ಸೈಸ್ ರೇಂಜ್ ಆಫೀಸ್ನ ಪ್ರಿವೆಂಟೀವ್ ಆಫೀಸರ್ ಮಂಜುನಾಥ ಆಳ್ವ ಕೆ ನೇತೃತ್ವದ ತಂಡ ನಿನ್ನೆ ದಾಳಿ ನಡೆಸಿ ಅಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಗಾಗಿ ಬಚ್ಚಿಡಲಾಗಿದ್ದ 140 ಲೀಟರ್ ವಾಶ್ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬAಧಿಸಿ ಸ್ಥಳೀಯ ನಿವಾಸಿ ವೆಂಕಪ್ಪ (55) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸ ರ್ಗಳಾದ ಪ್ರಭಾಕರನ್ ಎಂ.ಎ, ಸದಾನಂದನ್, ವಿನೋದ್ ಕೆ, ರಿಫಸ್ಸ್ಸ್ನ್ ಟಿ.ಜೆ, ವಿಷ್ಣು ಟಿ ಮತ್ತು ಶಾಲಿನಿ ಎಂಬವರು ಒಳಗೊಂಡಿದ್ದಾರೆ.
ಚೆAಗಳ ಪನ್ನಿಪ್ಪಾರದಲ್ಲಿ ಕಾಸರಗೋಡು ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 8 ಗ್ರಾಂ ಗಾಂಜಾ ಪತ್ತೆಹಚ್ಚಿದೆ. ಇದಕ್ಕೆ ಸಂಬAಧಿಸಿ ಪನ್ನಿಪ್ಪಾರ ಕರಿಪೊಡಿ ವೀಟಿಲ್ನ ಮೊಹಮ್ಮದ್ ಲುಬೈಖರ್ ಕೆ (30) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಮಲ್ಜಿತ್ ಸಿ.ಎಂ, ಅಬ್ದುಲ್ ಅಸೀಸ್, ನಿಧೀಶ್ ಕೆ ಮತ್ತು ಅಜೆಯ್ ಟಿ.ಸಿ ಎಂಬವರು ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಒಳಗೊಂಡಿದ್ದರು.
ಕಾಸರಗೋಡು ನಗರದ ನುಳ್ಳಿಪ್ಪಾಡಿಯಲ್ಲಿ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ 180 ಎಂ.ಎಲ್ನ 76 ಪ್ಯಾಕೆಟ್ (12.96 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಹರಿಪ್ರಸಾದ್ ಎನ್ (31) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಸತೀಶನ್ ಕೆ, ಮಂಜುನಾಥನ್ ವಿ, ರಾಜೇಶ್ ಪಿ ಅಶ್ವತಿ ವಿ ಮತ್ತು ಸಜೀಶ್ (ಚಾಲಕ) ಎಂಬವರು ಒಳಗೊಂಡಿ ದ್ದರು. ಈ ಮಾಲನ್ನು ಆರೋಪಿಯ ಮನೆಯ ಕೊಠಡಿಯೊಂದರ ಗುಪ್ತ ಸ್ಥಳದಲ್ಲಿ ಬಚ್ಚಿಡಲಾಗಿತ್ತೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.