ಹೊಸಂಗಡಿಯಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣ

ಮಂಜೇಶ್ವರ: ಜಿಲ್ಲೆಯಲ್ಲಿ ಆರಂಭಗೊAಡ ಹೆದ್ದಾರಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಇದರಂತೆ ಹೊಸಂಗಡಿಯಲ್ಲಿ ಎರಡು ಹೆದ್ದಾರಿ ರಸ್ತೆ ಹಾಗೂ ಒಂದು ಸರ್ವೀಸ್ ರಸ್ತೆ ಈಗಾಗಲೇ ಸಿದ್ದಗೊಂಡಿದ್ದು, ಇನ್ನೊಂದು ಸರ್ವೀಸ್ ರಸ್ತೆ ನಿರ್ಮಾಣದ ಹಂತದಲ್ಲಿದೆ. ತಲಪಾಡಿಯಿಂದ ಹೊಸಂಗಡಿ ಪೇಟೆ ತನಕ ಈಗಾಗಲೇ ರಸ್ತೆ ಹಾಗೂ ದಾರಿ ದೀಪಗಳನ್ನು ಸ್ಥಾಪಿಸುವ ಕೆಲಸಗಳು ಪೂರ್ತಿಗೊಂಡಿದೆ. ಹೊಸಂಗಡಿ ಚೆಕ್‌ಪೋಸ್ಟ್ ಭಾಗದಲ್ಲಿ ಹೆದ್ದಾರಿ ರಸ್ತೆಗೆ ಡಾಮರೀಕರಣ ಬಿರುಸುನಿಂದ ನಡೆಯುತ್ತಿದೆ. ಹೊಸಂಗಡಿ ಪೇಟೆಯಲ್ಲಿ ಈ ಹಿಂದೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಆದರೆ ಸೇತುವೆ ಹಾಗೂ ರಸ್ತೆಗಳು ನಿರ್ಮಾಣಗೊಂಡಿರುವುದರಿAದ ವಾಹನಗಳ ದಟ್ಟಣೆಯಿಂದ ಮುಕ್ತಿಹೊಂದಿದೆ. ಉಪ್ಪಳ ಪೇಟೆಯಲ್ಲಿ ಫ್ಲೆöÊ ಒವರ್ ಕಾಮಗಾರಿ ನಡೆಯುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದ್ದು, ದಿನನಿತ್ಯ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರು ಸಂಕಷ್ಟಗೊAಡಿದ್ದಾರೆ.

You cannot copy contents of this page