ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿದ್ದ ಬಾಯಾರುಪದವು ನಿವಾಸಿ ಸೆರೆ

ಪೈವಳಿಕೆ: ವಿವಿಧ ಪ್ರಕರಣ ಗಳಲ್ಲಿ ಆರೋ ಪಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಾಯಾರುಪದವು ನಿವಾಸಿ ಇಬ್ರಾಹಿಂ ಮುಜಾಂಬಿಲ್ (೨೮)ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಈ ತಿಂಗಳ ೨೭ರಂದು  ಪುತ್ತೂರು ಮಾರ್ಕೆಟ್ ರಸ್ತೆಯಿಂದ ವಿಟ್ಲ ಪೊಲೀಸರ ತಂಡ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಎ. ೮ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ವಿರುದ್ಧ ಮಂಜೇಶ್ವರ ಠಾಣೆ, ಪುತ್ತೂರು ಠಾಣೆ, ಆಂಧ್ರಪ್ರದೇಶದ ವಿಶಾಖಪಟ್ಟಣ ಠಾಣೆಯಲ್ಲಿ ತಲಾ ಒಂದರಂತೆ ಹಾಗೂ ವಿಟ್ಲ ಠಾಣೆಯಲ್ಲಿ ೨ ಕೇಸು ದಾಖಲಾಗಿದೆ.

Leave a Reply

Your email address will not be published. Required fields are marked *

You cannot copy content of this page