ಶಾರದಾ ಏಕಾಹ ಭಜನಾ ಮಂದಿರದಲ್ಲಿ ದಶದಿನ ಬೇಸಿಗೆ ಶಿಬಿರ ಸಮಾಪ್ತಿ

ಮಂಗಲ್ಪಾಡಿ: ಇಲ್ಲಿನ ಶಾರದಾ ಏಕಾಹ ಭಜನಾ ಮಂದಿರದಲ್ಲಿ ಕಲಾಕುಂಚ ಕೇರಳ ಗಡಿನಾಡ ಶಾಖೆ ಮತ್ತು ಗೀತಜ್ಞಾನ ಯಜ್ಞ ಸಮಿತಿಯ ವತಿಯಿಂದ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಬೇಸಿಗೆ ಶಿಬಿರ ಸಮಾರೋಪಗೊಂಡಿತು. ಹಿರಿಯ ಸಾಹಿತಿ ಪ್ರೊ. ಪಿ.ಎನ್. ಮೂಡಿತ್ತಾಯ ಅತಿಥಿಯಾಗಿ ಭಾಗವಹಿಸಿ ಶಿಶುಗೀತೆ ಮಕ್ಕಳಿಗೆ ಕಲಿಸಿಕೊಟ್ಟರು. ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಶಿಕ್ಷಕಿ ಉಮಾದೇವಿ ಅಧ್ಯಕ್ಷತೆ ವಹಿಸಿದರು. ಹತ್ತು ದಿನಗಳ ಶಿಬಿರದ ಕುರಿತಾದ ವರದಿಯನ್ನು  ಪ್ರಭಾವತಿ ಟೀಚರ್ ವಾಚಿಸಿದರು. ಮಂಡೂಕ ಚರಿತ್ರೆ ಇದರ ಕುರಿತಾಗಿ ಸಂಕರ್ಷಣ ಚಿಂತನೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಉಳಿಯತ್ತಡ್ಕರನ್ನು ಸನ್ಮಾನಿಸಲಾಯಿತು. ಸವಿತಾ ಮಹೇಶ್ ಅಭಿನಂದನಾ ಪತ್ರ ವಾಚಿಸಿದರು. ರಾಮ ಕಾರಂತ, ಪಿ.ಎನ್. ಮೂಡಿತ್ತಾಯ ಗೌರವಿಸಿದರು. ಶಿಬಿರದಲ್ಲಿ ಮಕ್ಕಳಿಗೆ ಕುಣಿತ ಭಜನೆ, ಒಳಾಂಗಣ ಆಟ ಸಹಿತ ಹಲವು ಚಟುವಟಿಕೆಗಳನ್ನು ನಡೆಸಲಾಯಿತು. ಇದಕ್ಕೆ ನೇತೃತ್ವ ನೀಡಿದ ಪ್ರಭಾವತಿ ಟೀಚರನ್ನು ಜಯಲಕ್ಷ್ಮಿ ಕಾರಂತ್, ಅತಿಥಿಗಳು ಸನ್ಮಾನಿಸಿದರು. ಶಂಕರ ನಾರಾಯಣ ಭಟ್ ಕಿದೂರು ಶುಭ ಕೋರಿದರು. ಸುದರ್ಶನಪಾಣಿ ಬಲ್ಲಾಳ್ ಉಪಸ್ಥಿತರಿದ್ದರು. ಇದೇ ವೇಳೆ ಶಿಬಿರಾರ್ಥಿ ಅಪರ್ಣಾರಿಂದ ಯೋಗ ಪ್ರದರ್ಶನ ನಡೆಯಿತು.

ಮಕ್ಕಳಿಂದ ಗೀತಾ ಪಠನ ನಡೆಯಿತು. ತಾರಾಲತ ವಂದಿಸಿದರು. ಜಯಲಕ್ಷ್ಮಿ, ರಾಮಚಂದ್ರ ಹೊಳ್ಳ ನಿರೂಪಿಸಿದರು. ಲಕ್ಷ್ಮೀಶ ರಾವ್ ಮಕ್ಕಳಿಗೆ ಸ್ಮರಣಿಕೆ ನೀಡಿದರು.

Leave a Reply

Your email address will not be published. Required fields are marked *

You cannot copy content of this page