ಶುದ್ಧ ಹೃದಯದ ನಾಮಸ್ಮರಣೆ ಭಗವಂತನ ಆರಾಧನಾ ರೂಪ- ಅದಮಾರುಶ್ರೀ
ಮಧೂರು: ಶುದ್ಧ ಹೃದಯದ ನಾಮಸ್ಮರಣೆಯೇ ಭಗದಂತನ ಪ್ರೀತಿಯ ಆರಾಧನಾ ರೂಪವಾಗಿದ್ದು, ಅಚಲ ಭಕ್ತಿಗೆ ದೈವಾನುಗ್ರಹ ನಿರೀಕ್ಷೆಗೂ ಮೀರಿ ಒದಗಿಬರುತ್ತದೆ ಎಂದು ಉಡುಪಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನದಲ್ಲಿ ನುಡಿದರು.
ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ನಿನ್ನೆ ಆರಂಭಗೊAಡ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ ಹರಸಿದರು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದು, ಆನಂದ ಆಂತರAಗಿಕವಾದುದಾಗಿದ್ದು, ಸಂತೋಷ ಬಾಹ್ಯ ಭಾವ ಸ್ಪುರಣವಾಗಿದೆ. ನಮ್ಮಲ್ಲಿರಬೇಕಾದುದು ಶಾಶ್ವತ, ಒಳಭಾವಗಳ ಆನಂದವಾಗಿದೆ. ಅದು ದೈವಾನುಗ್ರಹದಿಂದ ಮಾತ್ರ ಸಾಧ್ಯ. ಬದುಕಿನ ಮೂಲಸೂತ್ರ ಧರ್ಮದ ಹಾದಿಯಾಗಿದ್ದು, ಆ ಹಾದಿ ನಮ್ಮನ್ನು ದೇವತಾ ಮನುಷ್ಯರನ್ನಾಗಿಸುತ್ತದೆ ಎಂದರು.
ಜೀವ, ಆತ್ಮಗಳ ಸೂಕ್ಷö್ಮ ವ್ಯವಸ್ಥೆ ದೇವಾಲಯಗಳ ಅಂತರAಗವಾಗಿದ್ದು, ಭಕ್ತಿ ಮಾರ್ಗಕ್ಕೆ ಶಕ್ತಿತುಂಬುವ ತೈಲ ದೇವಾಲಯಗಳಿಂದ ವ್ಯಕ್ತಿ, ಸಮಾಜಕ್ಕೆ ಲಭ್ಯವಾಗುತ್ತದೆ ಎಂದು ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ಮಧೂರು ಪಂ. ಅಧ್ಯಕ್ಷ ಕೆ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಆರ್. ಎಸ್.ಎಸ್.ಅಖಿಲ ಭಾರತ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಗಣಪತಿಯನ್ನು ಮಿಥ್(ಕಲ್ಪನೆ) ಎಂದು ಕರೆದ ಜನನಾಯಕರಿರುವ ಇಂದಿನ ನವ ಸಮಾಜಕ್ಕೆ ವಿಘ್ನಕರನೂ, ವಿಘ್ನಹರನೂ ಆದ ಆ ತತ್ವದ ನೈಜತೆಯನ್ನು ತೋರಿಸುವ ಪ್ರಯತ್ನಗಳಾಗಬೇಕು. ಭಾರತೀಯ ಪ್ರಾಚೀನ ಪರಂಪರೆಯಲ್ಲಿ ಸಕಲ ಜ್ಞಾನಗಳೂ ಅಡಗಿದ್ದು, ಅದನ್ನು ಹೊಸ ಜನತೆಗೆ ಕಲಿಸುವ, ಶಕ್ತಿ ಬಿಂಬಿಸುವ ಪ್ರಯತ್ನಗಳಾಗಬೇಕು ಎಂದರು. ‘ಧರ್ಮ, ಪ್ರಜಾ ಸಿದ್ಧö್ಯರ್ಥಂ’ ಎಂಬ ನಮ್ಮ ಪಾರಂಪರಿಕ ವಿವಾಹಪೂರ್ವ ಸಂಕಲ್ಪಗಳು ಇಂದು ಮಾಸುತ್ತಿರುವುದು ಆತಂಕಕಾರಿಯಾದುದು. ‘ನಾನೆಂಬ’ ಭಾವ ಮರೆಯಾಗಿ ‘ನಾವೆಂಬ’ ಸಮಷ್ಠಿ ಪ್ರಜ್ಞೆಯೇ ಭರತ ಖಂಡದ ಅಂತರAಗ. ಹಂಚಿ ತಿನ್ನುವ, ಹಲವರೊಂದಿಗೆ ಒಂದಾಗಿ ಬದುಕುವ ವಿಶಾಲತೆ ನಮ್ಮಲ್ಲಿರಬೇಕು. ದೇವಾಲಯಗಳು, ಶಿಕ್ಷಣ ಕೇಂದ್ರಗಳು ಈ ನಿಟ್ಟಿನಲ್ಲಿ ಮಾನವ ಪ್ರಜ್ಞೆ, ಸಕಲರೊಂದಿಗೆ ನಿಷ್ಕಲ್ಮಷ ಪ್ರೇಮ, ಆಧ್ಯಾತ್ಮಕ ಶಕ್ತಿಯ ತೋರ್ಬೆರಳುಗಳಾಗಿ ಬೆಳಗಬೇಕು ಎಂದು ಅವರು ಕರೆ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವ ಉಪಾಧ್ಯಕ್ಷ, ಉದ್ಯಮಿ ಬಿ.ಕೆ.ಮಧೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಡಾ.ಹರಿಕೃಷ್ಣ ಬಂಗೇರ, ಏವಂದೂರು ಗೋಪಾಲ ಮಣಿಯಾಣಿ, ಸಿ.ಎಚ್. ಧರ್ಮಪಾಲ ಚೇನಕ್ಕೋಡು ಶುಭಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಗಿರೀಶ್ ಸಂಧ್ಯಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬ್ಲಾ.ಪಂ. ಸದಸ್ಯ ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು. ಮೋಹನ್ ಕುಮಾರ್ ಅಡ್ಕ ನಿರೂಪಿಸಿದರು.
ರಾತ್ರಿ ಮಧೂರು ಶ್ರೀ ಸಿದ್ದಿವಿನಾಯಕ ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿಧ್ಯ, ಬೆಂಗಳೂರಿನ ನೃತ್ಯಕುಟೀರದ ವಿದುಷಿ ದೀಪಾ ಭಟ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.