ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೈವಳಿಕೆ ವಲಯ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ

ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಮಂಜೇಶ್ವರ ಇದರ ಆಶ್ರಯದಲ್ಲಿ ಪೈವಳಿಕೆ ವಲಯದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಲಾಲ್‌ಬಾಗ್ ಕುಲಾಲ ಭವನದಲ್ಲಿ ನಡೆಯಿತು. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಉದ್ಘಾಟಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ನಾಲ್ಕು ದಶಕಗಳ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸೇವೆಯ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ ಯೋಜನಾಧಿಕಾರಿ ಶಶಿಕಲಾ ಸುವರ್ಣ ಯೋಜನೆಯ ಸದಸ್ಯರಿಗೆ ಮತ್ತು ಅವರ ಮನೆಯವರಿಗೆ ಸಿಗುವ ಸಂಪೂರ್ಣ ಸುರಕ್ಷಾ, ಪ್ರಗತಿ ರಕ್ಷಕವಚ, ಜನ ಮಂಗಲ ಕಾರ್ಯಕ್ರಮ. ವಿದ್ಯಾರ್ಥಿ ಗಳಿಗೆ ಕೊಡಲ್ಪಡುವ ಸುಜ್ಞಾನಿಧಿ, ನಿರ್ಗತಿಕರಿಗೆ ಮಾಸಾಸನ ಹಾಗೂ ಇನ್ನಿತರ ಹಲವು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಗತಿ ನಿಧಿಯ ಸೇವಾ ಶುಲ್ಕದ ಬಗ್ಗೆ ಲೆಕ್ಕಪರಿಶೋಧಕ ಪವಿತ್ರಾಕ್ಷಿ ಮಾಹಿತಿ ನೀಡಿದರು, ಸುಂಕದಕಟ್ಟೆ ವಲಯದ ಮೇಲ್ವಿಚಾರಕ ಕೃಷ್ಣಪ್ಪ, ವಲಯದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಭಾಗವಹಿಸಿದರು. ಸೇವಾ ಪ್ರತಿನಿಧಿ ಲೀಲಾವತಿ ಸ್ವಾಗತಿಸಿ, ಜಯಶ್ರೀ ವಂದಿಸಿದರು. ಮೇಲ್ವಿಚಾರಕÀ ಸಹದೇವ ನಿರ್ಮಿಸಿದರು.

Leave a Reply

Your email address will not be published. Required fields are marked *

You cannot copy content of this page