ಸಂಸದೀಯ ಸ್ಥಾಯೀ ಸಮಿತಿ ಸಭೆ ನಾಳೆ: ಕ್ರಿಮಿನಲ್ ಕಾನೂನು ಬದಲಿಸುವ ಮೂರು ಮಸೂದೆಗಳ ಪರಿಗಣನೆ

ನವದೆಹಲಿ: ಭಾರತೀಯ ನ್ಯಾಯ ಸಂಹಿತೆ ೨೦೨೩, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ ಮತ್ತು ಭಾರತೀಯ ಸಾಕ್ಷರತಾ ಸಂಹಿತೆ ೨೦೨೩ ಕುರಿತು ಕರಡು ವರದಿಗಳನ್ನು ಪರಿಗಣಿಸಲು ಮತ್ತು ಅಂಗೀಕರಿಸಲು ಕೇಂದ್ರ ಗೃಹ  ವ್ಯವಹಾರಗಳ ಸಂಸದೀಯ ಸ್ಥಾಯೀ ಸಮಿತಿ ಸಭೆ ನಾಳೆ ದೆಹಲಿಯಲ್ಲಿ ಮಧ್ಯಾಹ್ನ ೨ ಗಂಟೆಗೆ  ಆರಂಭ ಗೊಳ್ಳಲಿದೆ. ಭಾರತೀಯ ನಾಗರಿಕಾ  ಸುರಕ್ಷಾ ಸಂಹಿತೆ-೨೦೨೩, ಭಾರತೀಯ ನ್ಯಾಯ ಸಂಹಿತೆ ೨೦೨೩ ಮತ್ತು ಭಾರತೀಯ ಸಾಕ್ಷರತಾ ಸಂಹಿತೆ ೨೦೨೩ಗಳನ್ನು ಕಳೆದ ಅಗೋಸ್ತ್ ೧೧ರಂದು ಸಂಸತ್‌ನಲ್ಲಿ ಮಂಡಿಸಲಾ ಗಿತ್ತು. ಈ ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ)-೧೮೬೦, ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಮತ್ತು ೧೯೭೩ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ, ೧೮೭೨ನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ.

ಮಸೂದೆಗಳನ್ನು ಪರಿಚಯಿಸುವಾಗ ಗೃಹ ಸಚಿವ ಅಮಿತ್ ಷಾ ಅವರು ಈ ಮೂರು ಹೊಸ ಕಾನೂನುಗಳ ಆತ್ಮವು ಸಂವಿಧಾನವು ನಾಗರಿಕರಿಗೆ ನೀಡಿರುವ ಎಲ್ಲಾ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page