ಕೇಂದ್ರ ಗೃಹ ಸಚಿವಾಲಯಕ್ಕೆ ಬಾಂಬ್ ಸ್ಫೋಟ ಬೆದರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ಂiiಲ್ಲಿ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದುಕೊಂಡಿರು ವಂತೆಯೇ ಕೇಂದ್ರಗೃಹ ಸಚಿವಾಲಯ ಕಟ್ಟಡ ಒಳಗೊಂಡಿರುವ ದೆಹಲಿಯ ನೋರ್ತ್ ಬ್ಲೋಕ್‌ಗೆ  ಬಾಂಬ್ ಸ್ಫೋಟದ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ.  ಈ ಸಂದೇಶ ಲಭಿಸಿದಾಕ್ಷಣ ದೆಹಲಿ ಪೊಲೀಸರು ನೋರ್ತ್ ಬ್ಲೋಕ್‌ಗೆ ಆಗಮಿಸಿ ಅದನ್ನೆಲ್ಲಾ ವ್ಯಾಪಕವಾಗಿ ಜಾಲಾಡಿ ದರೂ ಯಾವುದೇ ಸ್ಫೋಟಕ ಪತೆ ಯಾಗಿಲ್ಲ.

ಬಾಂಬ್ ಸ್ಫೋಟ ನಿಗ್ರಹದಳ ಹಾಗೂ ಬಾಂಬ್ ಪತ್ತೆದಳಗಳೊಂದಿಗೆ ಪೊಲೀಸರು ಕಟ್ಟಡದ ಒಳಗೆ ಹಾಗೂ ಸುತ್ತಮುತ್ತಲಿನ ಕಟ್ಟಡಗಳ ಮೂಲೆ ಮೂಲೆಗಳಲ್ಲಿ ಪರಿಶೀಲಿಸಿದರು. ಆದರೆ ಯಾವುದೇ ಬಾಂಬ್ ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.  ಕೆಲವು ದಿನಗಳ ಹಿಂದೆ ದೆಹಲಿಯ ಹಲವು ಶಾಲೆಗಳು, ಆಸ್ಪತ್ರೆಗಳು, ಬೆಂಗಳೂರು ಹಾಗೂ ಗುಜರಾತ್‌ನ ಹಲವು ಶಾಲಾ ಕಾಲೇಜುಗಳಿಗೂ ಇದೇ ರೀತಿಯ ಇ ಮೇಲ್ ಬೆದರಿಕೆ ಬಂದಿದ್ದವು.

Leave a Reply

Your email address will not be published. Required fields are marked *

You cannot copy content of this page