ಸಹಕಾರಿ ಸಂರಕ್ಷಣೆ ಸಂಗಮ ನ.೫ರಂದು

ಕಾಸರಗೋಡು: ಸಹಕಾರಿ ವಲಯದ ವಿರುದ್ಧವಾದ ಅಪಪ್ರಚಾರ ಗಳನ್ನು ಪ್ರತಿರೋಧಿಸಲು ಸಹಕಾರಿ ನೌಕರರ ಕೋ-ಆರ್ಡಿನೇಶನ್ ಸಮಿತಿ ಯ ನೇತೃತ್ವದಲ್ಲಿ ನ.೫ರಂದು ಜಿಲ್ಲೆಯ ಎರಡು ಕೇಂದ್ರಗಳಲ್ಲಿ ಸಹಕಾರಿ ಸಂರ ಕ್ಷಣಾ ಸಂಗಮ ನಡೆಸಲಾಗುವುದು.  ಬೆಳಿಗ್ಗೆ ೧೦ಕ್ಕೆ ಕಾಸರಗೋಡು ಕೇರಳ ಬ್ಯಾಂಕ್ ನಲ್ಲಿ ನಡೆಯುವ ಸಂಗಮವನ್ನು ಕೋ-ಆರ್ಡಿನೇಶನ್ ಸಮಿತಿ ರಾಜ್ಯ ಅಧ್ಯಕ್ಷ ಇ.ಡಿ. ಸಾಬ, ಕಾಞಂಗಾಡ್ ವ್ಯಾಪಾರ ಭವನದಲ್ಲಿ ನಡೆಯುವ ಸಂಗಮವನ್ನು ಕೇರಳ ಬ್ಯಾಂಕ್ ಆಡಳಿತ ಸಮಿತಿ ಸದಸ್ಯ ಸಾಬು ಎಬ್ರಹಾಂ ಉದ್ಘಾಟಿಸುವರು. ಹಲವರು ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page