ಸಾರ್ವಜನಿಕ ಬಾವಿ ಕುಸಿದುಬಿದ್ದು ಮೂರು ತಿಂಗಳು ನೀರಿನ ಸಮಸ್ಯೆ ತೀವ್ರ; ದುರಸ್ತಿಗೆ ಒತ್ತಾಯ

ಉಪ್ಪಳ:  ಹಲವಾರು ವರ್ಷಗ ಳಿಂದ ಬೇಸಿಗೆ, ಮಳೆಗಾಲವೆಂಬ ವ್ಯತ್ಯಾಸವಿಲ್ಲದೆ  ಹಲವಾರು ಕುಟುಂಬಗಳಿಗೆ ನೀರಿನ ಆಶ್ರಯವಾ ಗಿದ್ದ ಸಾರ್ವಜನಿಕ ಬಾವಿ ಕುಸಿದುಬಿ ದ್ದು ಮೂರು ತಿಂಗಳು ಕಳೆದರೂ ದುರಸ್ತಿಯಾಗಲಿಲ್ಲ. ಇದರಿಂದ ಜನರು ನೀರಿನ ಸಮಸ್ಯೆ ಎದುರಿಸಬೇಕಾಗಿ ಬಂದಿದೆ.

ಮಂಗಲ್ಪಾಡಿ ಪಂಚಾಯತ್‌ನ ಎರಡನೇ ವಾರ್ಡ್ ಉಪ್ಪಳ ಭಗವತೀಗೇಟ್ ಬಳಿಯಿರುವ ಸಾರ್ವಜನಿಕ ಬಾವಿ ಕಳೆದ ಜುಲೈ ತಿಂಗಳಲ್ಲಿ ಸುರಿದ ಧಾರಾಕಾರ ಮಳೆ ವೇಳೆ ಆವರಣಗೋಡೆ ಸಹಿತ ಕುಸಿದು ಬಿದ್ದಿದೆ. ಇದನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ನಾಗರಿಕರು ಪಂಚಾಯತ್‌ಗೆ ಮನವಿ ಸಲ್ಲಿಸಿದ್ದರು.  ಇದರಂತೆ ಜನಪ್ರತಿನಿಧಿ ಹಾಗೂ  ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿಕೊಂಡು ಮರಳಿದ್ದಾರೆ. ಆದರೆ ಬಾವಿಯ ದುರಸ್ತಿಗೆ  ಇನ್ನೂ ಕೂಡಾ ಕ್ರಮ ಕೈಗೊಂಡಿಲ್ಲ. ಇದರಿಂದ ಧಾರಾಳ ನೀರು ಇರುವ ಬಾವಿಯೊಂದು ಉಪಯೋಗಶೂನ್ಯಗೊಂಡಿದೆ ಎಂದು ನಾಗರಿಕರು ದೂರುತ್ತಿದ್ದಾರೆ.  ಈಗಾಗಲೇ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂದಿದ್ದು, ಭವಿಷ್ಯದಲ್ಲಿ ಇದು ಇನ್ನಷ್ಟು ತೀವ್ರಗೊಳ್ಳಲಿದೆ. ಆದ್ದರಿಂದ ನೀರು ಪೂರ್ಣವಾಗಿ ಬತ್ತುವ ಮೊದಲೇ ಈ ಬಾವಿಯನ್ನು ದುರಸ್ತಿಗೊಳಿಸಬೇಕೆಂದು ನಾಗರಿಕರು ಪಂಚಾಯತ್ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page