ಸಿನಿಮಾವನ್ನು ಗೋತಾ ಮಾಡಿಸುವ ರೀತಿಯ ರಿವ್ಯೂ ವಿರುದ್ಧ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು
ಕಾಸರಗೋಡು: ಸಿನಿಮಾ ಬಿಡುಗಡೆಗೊಂಡ ಬೆನ್ನಲ್ಲೇ ಅದನ್ನು ಕಳಪೆ ಮಾದರಿಯಾಗಿ ಚಿತ್ರೀಕರಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿ ಆ ಮೂಲಕ ಸಿನಿಮಾವನ್ನು ಹೆಚ್ಚಿಗೆ ಗಳಿಕೆಯಲ್ಲಿ ಗೋತಾ ಗೊಳಿಸುವಂತೆ ಮಾಡುವವರ ವಿರುದ್ಧ ರಾಜ್ಯ ಪೊಲೀಸರು ಕಾನೂನ ಕ್ರಮ ಜರಗಿಸತೊಡಗಿದ್ದಾರೆ. ಇದಕ್ಕೆ ಸಂಬಂಧಿಸಿ ಇಡೀ ರಾಜ್ಯದಲ್ಲೇ ಇದೇ ಪ್ರಥಮ ಎಂಬಂತೆ ಎರ್ನಾಕುಳಂ ಸೌತ್ ಪೊಲೀಸರು ಎಂಟು ಯೂಟ್ಯೂಬ್ಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ಫೇಸ್ ಬುಕ್ನ ವಿರುದ್ಧವೂ ಕೇಸು ದಾಖಲಿಸಲಾಗಿದೆ.
‘ರೋಹನ್ ಮಗನ್ ಕೋರಾ’ ಎಂಬ ಮಲಯಾಳಂ ಸಿನಿಮಾದ ನಿರ್ದೇಶಕ ಉಬೈದ್ ಇಬ್ರಾಹಿಂ ಅವರು ಈ ಬಗ್ಗೆ ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಿನಿಮಾ ಬಿಡುಗಡೆಗೊಂಡ ಬೆನ್ನಲ್ಲೇ ಅದು ತೀವ್ರ ಕಳಪೆ ಮಟ್ಟದ ಚಿತ್ರವಾಗಿದೆ ಎಂದು ತೋರಿಸುವ ರೀತಿಯಲ್ಲಿ ಎಂಟು ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಚಿತ್ರೀಕರಿಸಲಾಗಿತ್ತು. ಆ ಮೂಲಕ ತನ್ನ ಸಿನಿಮಾವನ್ನು ಗೋತಾ ಮಾಡಿಸುವಂತೆ ಮಾಡುವ ಉದ್ದೇಶಪೂರ್ವಕ ಯತ್ನ ನಡೆಸಲಾಗಿದೆಯೆಂದು ದೂರಿನಲ್ಲಿ ಆ ಚಿತ್ರದ ನಿರ್ದೇಶಕರು ಆರೋಪಿಸಿದ್ದಾರೆ. ಸಿನಿಮಾ ರಿಲೀಸ್ಗೊಂಡಾಕ್ಷಣ ಅದರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರ್ವಕವಾಗಿ ಪ್ರಚಾರ ನಡೆಸಿ ಸಿನಿಮಾವನ್ನು ಸ್ಟಾಪ್ಗೊಳಿಸುವಂತೆ ಮಾಡಲು ಕೆಲವರು ವ್ಯವಸ್ಥಿತ ಸಂಚಿನಲ್ಲಿ ತೊಡಗಿದ್ದು, ಅಂತಹವರ ಬೇಟೆಗಾಗಿ ಪೊಲೀಸರು ಈಗ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸೂಪರ್ ಸ್ಟಾರ್ಗಳ ಸಿನಿಮಾ ಬಿಡುಗಡೆ ವೇಳೆ ಅದರ ವಿರುದ್ಧ ಇಂತಹ ವ್ಯಾಪಕ ಕಳಪೆ ರೀತಿಯ ಪ್ರಚಾರ ನಡೆಸಲಾಗುತ್ತಿದೆ. ಇಂತಹ ಪ್ರಚಾರಗಳಿಂದಾಗಿ ಅದನ್ನು ಬಿಗ್ ಬಜೆಟ್ನ ಸಿನಿಮಾ ಗಳಿಕೆಯಲ್ಲಿ ಗೋತಾಬಿದ್ದು ಕೋಟಿಗಟ್ಟಲೆ ರೂ.ಗಳ ನಷ್ಟ ಅನುಭವಿಸಿದ ಅದೆಷ್ಟೋ ಉದಾಹರಣೆಗಳಿವೆ.
ಇನ್ನು ಕೆಲವರು ಸಿನಿಮಾಕ್ಕೆ ಮತೀಯ ಬಣ್ಣ ನೀಡಿ ಆ ಮೂಲಕವೂ ಅಂತಹಚಿತ್ರಗಳ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಇಂತಹ ಎಲ್ಲರ ಮೇಲೂ ಪೊಲೀಸರು ಈಗ ಹದ್ದಿನ ಕಣ್ಣಿರಿಸತೊಡಗಿದ್ದಾರೆ.