ಸಿಪಿಎಂ ಮಾನಿಪ್ಪಾಡಿ ಶಾಖಾ ಸಮಿತಿ ಸಭೆ: ನವ ಕೇರಳ ಸಭೆ ಯಶಸ್ವಿಗೆ ನಿರ್ಧಾರ

ಪೈವಳಿಕೆ: ನವಂಬರ್ ೧೮ರಂದು ಮಂಜೇಶ್ವರ ವಿಧಾನಸಭಾ ಮಂಡಲದ ಪೈವಳಿಕೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ಭಾಗವಹಿಸುವ ನವ ಕೇರಳ ಸಭೆಯನ್ನು ಯಶಸ್ವಿಗೊಳಿಸಲು ಸಿಪಿಎಂ ಮಾನಿಪ್ಪಾಡಿ ಶಾಖಾ ಸಮಿತಿ ಸಭೆಯಲ್ಲಿ ತೀರ್ಮಾನಿಸ ಲಾಗಿದೆ. ಈ ಸಂಬಂಧವಾಗಿ ಸೇರಿದ ಮಾನಿಪ್ಪಾಡಿ ಶಾಖಾ ಸಮಿತಿ ಸಭೆಯಲ್ಲಿ ಮಾಧವ ಮಾನಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಚಂದ್ರ ನಾಕ್ ಮಾನಿಪ್ಪಾಡಿ ಪಕ್ಷದ ತೀರ್ಮಾನಗಳನ್ನು ವಿವರಿಸಿದರು. ಉದಯ ಕುಮಾರ್ ಸ್ವಾಗತಿಸಿ, ವಿನೋದ್ ಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page